ಕರಿಕೆಯಲ್ಲಿ ಡೆಂಗ್ಯು ಜ್ವರ ಪತ್ತೆ
29/05/2020
ಮಡಿಕೇರಿ ಮೇ 29 : ಪ್ರತಿ ವರ್ಷ ಕರಿಕೆಯ ಜನರನ್ನು ಕಾಡುತ್ತಿರುವ ಮಾರಕ ಡೆಂಗ್ಯು ಈ ವರ್ಷವೂ ಕಾಣಿಸಿಕೊಂಡಿದೆ. ಕರಿಕೆ ಚೆತ್ತುಕಾಯ ಡೊಡ್ಡಚೇರಿಯ ಐವತ್ತೈದು ವರ್ಷದ ಮಹಿಳೆಯೋರ್ವರಿಗೆ ಕೆಲ ದಿನಗಳಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆ ರಕ್ತ ಪರಿಶೀಲನೆ ನಡೆಸಿದಾಗ ವೈದ್ಯಕೀಯ ವರದಿಯಿಂದ ಡೆಂಗ್ಯು ಪಾಸಿಟಿವ್ ಪತ್ತೆಯಾಗಿದ್ದು, ಇದೀಗ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದಲ್ಲಿ ಈ ವರ್ಷ ಇದು ಪ್ರಥಮ ಡೆಂಗ್ಯು ಪ್ರಕರಣವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಅವರು ಡೆಂಗ್ಯು ಜ್ವರ ಪತ್ತೆಯಾದ ಬಗ್ಗೆ ಈಗಷ್ಟೇ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯಿಂದ ಮಾಹಿತಿ ಪಡೆದು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.