ಸರಳವಾಗಿ ನಡೆದ ದೇಚೂರು ಶ್ರೀ ರಾಮ ಮಂದಿರದ ದೇವಾಲಯದ ವಾರ್ಷಿಕೋತ್ಸವ
29/05/2020

ಮಡಿಕೇರಿ ಮೇ 29 : ನಗರದ ದೇಚೂರು ಶ್ರೀ ರಾಮ ಮಂದಿರದ ದೇವಾಲಯ ಸಮಿತಿ ವತಿಯಿಂದ ದೇವಾಲಯದ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.
ಕೊರೋನಾ ಲಾಕ್‍ಡೌನ್ ಹಿನ್ನೆಲೆ ದೇವಾಲಯ ಸಮಿತಿಯ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೂಲಕ ನಡೆಸಲಾಯಿತು.