ಕಿರಗಂದೂರು ಗ್ರಾಮದಲ್ಲಿ 1 ಲಕ್ಷ ರೂ. ಮೌಲ್ಯದ ಬೀಟೆ ನಾಟ ವಶ

31/05/2020

ಮಡಿಕೇರಿ ಮೇ 31 : ಕಾಫಿ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1 ಲಕ್ಷ ರೂ. ಮೌಲ್ಯದ ಬೀಟೆ ಮರದ ನಾಟಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದರ್ಶನ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಐಗೂರಿನ ಮೊಗಪ್ಪ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಎ.ಸಿ.ಎಫ್ ಕೊಚ್ಚೇರ ನೆಹರು, ಆರ್.ಎಫ್.ಒ. ಶಮಾ ಅವರ ಮಾರ್ಗದರ್ಶನದಲ್ಲಿ ಮಾದಾಪುರ ಉಪವಲಯದ ಡಿ.ಆರ್.ಎಫ್.ಒ ವೈ.ಕೆ.ಜಗದೀಶ್, ತರಬೇತಾರ್ಥಿ ರಿಶಾ ಪಾರ್ವತಿ, ಅರಣ್ಯ ರಕ್ಷಕರಾದ ಭರಮಪ್ಪ, ದಳವಾಯಿ, ವೀಕ್ಷಕರಾದ ವೀರಪ್ಪ, ಮಂಜುನಾಥ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.