ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಎಂಎಲ್‌ಸಿ ಸುನೀಲ್ ಸುಬ್ರಹ್ಮಣಿ

01/06/2020

ಮಡಿಕೇರಿ ಜೂ.1 : ಕೊಡಗು ಜಿಲ್ಲಾ ‌ಪೊಲೀಸ್ ಇಲಾಖೆಯ ಡಿಎಆರ್ ವಸತಿ ಗೃಹದ ಬಳಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಹ್ಮಣಿ ಅವರು ಪರಿಶೀಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಡಿವೈಎಸ್ ಪಿ ದಿನೇಶ್ ಕುಮಾರ್ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಜರಿದ್ದರು. ಎಂಎಲ್ ಸಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.