ಕೇರಳ ಪ್ರವೇಶಿಸಿದ ನೈಋತ್ಯ ಮಾನ್ಸೂನ್

02/06/2020

ತಿರುವನಂತಪುರಂ ಜೂ.1 : ನೈಋತ್ಯ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ದೃಢಪಡಿಸಿದೆ. ಜೂ.1 ರಂದು ಕೇರಳ ಪ್ರವೇಶಿಸಿರುವ ಮುಂಗಾರು ಇನ್ನೂ ಮಂಗಳವಾರ ಇಲ್ಲವೆ ಬುಧವಾರ ರಾಜ್ಯಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು ಮುಂಗಾರು ಘೋಷಣೆಗೆ ಅಗತ್ಯ ಮಾನದ್‍ಂಡಗಳ ಘೋಷಣೆಯಾಗಿದೆ ಎಂದು ಐಎಂಡಿ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣ ಕೇರಳದಲ್ಲಿ ಭಾರೀ ಮಳೆಯಾಗಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಮಾನ್ಸೂನ್ ಆಗಮನಆಗಲಿದೆಂದು ಐಎಂಡಿ ಹೇಳಿದೆ.
ಮಂಗಳವಾರ ಇಲ್ಲವೇ ಬುಧವಾರ ರಾಜ್ಯ ಪ್ರವೇಶಿಸುವ ಮುಂಗಾರಿನ ಪರಿಣಾಮ ಮೂರು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಂಭವವಿದೆ.
ಈ ಮೊದಲು, ಜೂನ್ 5 ರೊಳಗೆ ಮಾನ್ಸೂನ್ ಆಗಮನವಾಗಲ್ಲ ಎನ್ನಲಾಗಿತ್ತು. ಈಗ ನಾಲ್ಕು ದಿನಗಳ ಮುನ್ನ ಎಂದರೆ ಜೂನ್ 1 ಕ್ಕೆ ಕೇರಳಕ್ಕೆ ಆಗಮಿಸಿದೆ.