ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ : ಚೀನಾ ಉತ್ಪಾಧಿತ ವಸ್ತುಗಳನ್ನು ತಿರಸ್ಕರಿಸಿ ಕರೆ

18/06/2020

ಸೋಮವಾರಪೇಟೆ ಜೂ. 18 : ಭಾರತ ದೊಂದಿಗೆ ಸಂಘರ್ಷಕ್ಕಿಳಿದಿರುವ ಚೀನಾ ಉತ್ಪಾದಿತ ವಸ್ತುಗಳನ್ನು ತಿರಸ್ಕರಿಸಿ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಉಲ್ಲಾಸ್ ತಿಮ್ಮಯ್ಯ ಕಿಡಿಕಾರಿದ್ದಾರೆ.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಾಂತಿಯ ಮುಖವಾಡ ದರಿಸಿ ಚೀನಾ ಭಾರತ ದೊಂದಿಗೆ ಸಂಘರ್ಷಕ್ಕಿಳಿದಿದೆ ನೇರವಾಗಿ ಯುದ್ದ ಮಾಡದೆ ದೊಣ್ಣೆ, ಮುಳ್ಳುಗಳಿಂದ ಚೀನಾ ಸೈನಿಕರು ಭಾರತೀಯ ಸೈನಿಕರ ಮೇಲೆ ಹಲ್ಲೆಮಾಡಿ ಪೈಶಾಚಿಕ ಕೃತ್ಯ ಮೆರೆದಿದೆ ಎಂದರು. ಚೀನಾಕೆ ತಕ್ಕ ಪಾಠ ಕಲಿಸಲೇಬೇಕಾಗಿದೆ ಭಾರತೀಯರಾದ ನಾವುಗಳು ಚೀನಾ ಉತ್ಪಾದಿತ ಯಾವುದೇ ವಸ್ತುಗಳನ್ನು ಅವರ ಆಪ್ಗಳನ್ನು ಬಳಸದೆ ಅವರು ಆರ್ಥಿಕವಾಗಿ ಕುಗ್ಗುವಂತೆ ಮಾಡಬೇಕು. ಆದ್ದರಿಂದ ಚೀನಾ ವಸ್ತುಗಳನ್ನು ತಿರಸ್ಕರಿಸಿ ಎಂದರು.
ಪುಷ್ಪಾರ್ಚನೆ ಮೂಲಕ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಲಾಯಿತು ಈ ಸಂಧರ್ಭ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪೂರ್ಣಿಮ ಗೋಪಾಲ್, ಬಿ.ಜೆ ದೀಪಕ್ ಪ್ರಮುಖರುಗಳಾದ ಸುಭಾಷ್ ತಿಮ್ಮಯ್ಯ, ಉಮೇಶ್, ದರ್ಶನ್ ಜೋಯ್ಯಪ್ಪ, ಹಾಗೂ ಮುಂತಾದವರು ಹಾಜರಿದ್ದರು.