ಹಿರಿಯ ಪತ್ರಕರ್ತ ಚಂದ್ರು ನಿಧನ

June 19, 2020

ಬೆಂಗಳೂರು ಜೂ.19 : ಹಿರಿಯ ಪತ್ರಕರ್ತ, ಗೌರೀಪುರ ಚಂದ್ರು (54 ವರ್ಷ) ಅವರು ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಜಯ ಕರ್ನಾಟಕದ ಮುಖ್ಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಗೌರೀಪುರ ಚಂದ್ರು ಅವರು, ಕೆಲ ದಿನಗಳಿಂದ ಜ್ವರ ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 12ರ ಹೊತ್ತಿಗೆ ಪ್ರಜ್ಞಾಶೂನ್ಯರಾಗಿ ಕುಸಿದ ಬಿದ್ದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರ ಸಾವು ಖಚಿತಪಡಿಸಿದ್ದಾರೆ. ಈ ವೇಳೆ ಅವರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಅವರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

error: Content is protected !!