ಪ್ರಧಾನಿ ವಿರುದ್ಧ ರಾಹುಲ್ ವಾಗ್ಧಾಳಿ

22/06/2020

ನವದೆಹಲಿ ಜೂ.22 : ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ವಿಚಾರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯ ಬದಲಿಗೆ ಸರೆಂಡರ್(ಶರಣಾಗತಿ) ಮೋದಿ ಎಂದು ಕರೆದರು. ಭಾರತದ ಭೂಪ್ರದೇಶವನ್ನು ಚೀನೀಯರಿಗೆ ಒಪ್ಪಿಸಿಬಿಟ್ಟು ಶರಣಾಗಿದ್ದಾರೆ ಮೋದಿ ಎಂದು ಆರೋಪಿಸಿದರು.
ನರೇಂದ್ರ ಮೋದಿ ನಿಜವಾಗಿಯೂ ಸರೆಂಡರ್ ಮೋದಿ ಎಂದು ಟ್ವೀಟ್ ಮೂಲಕ ಟೀಕಿಸಿದರು. ಇಂದು ತಮ್ಮ ವಾಗ್ದಾಳಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಚೀನಾದ ಸಿಟ್ಟು, ಆಕ್ರೋಶಕ್ಕೆ ಮೋದಿಯವರು ಭಾರತದ ಭೂ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿಬಿಟ್ಟಿದ್ದಾರೆ ಎಂದರು.