ಚೀನಾ ವಿರುದ್ಧ ಟ್ರಂಪ್ ಅಸಮಾಧಾನ

22/06/2020

ವಾಷಿಂಗ್ಟನ್ ಜೂ.21 : ಜಗತ್ತಿನಾದ್ಯಂತ ನಾಲ್ಕೂವರೆ ಲಕ್ಷ ಜನರನ್ನು ಬಲಿ ಪಡೆದು ಸುಮಾರು 8.5 ಮಿಲಿಯನ್ ಗೂ ಹೆಚ್ಚು ಜನರಿಗೆ ತಗುಲಿರುವ ಮಾರಕ ಕೊರೋನಾ ವೈರಸ್ ನ್ನು “ಕುಂಗ್ ಫ್ಲೂ” ಎಂದು ಕರೆದಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದರ ಹರಡುವಿಕೆಗೆ ಚೀನಾ ಕಾರಣ ಎಂದು ಮತ್ತೆ ದೂಷಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕೊರೋನಾವೈರಸ್ ಹುಟ್ಟಿಕೊಂಡಿದ್ದರಿಂದ ಚೀನಾವನ್ನು ಪದೇ ಪದೇ ದೂಷಿಸುತ್ತಿರುವ ಟ್ರಂಪ್, ವೈರಸ್ ತಡೆಗಟ್ಟುವಲ್ಲಿ ಚೀನಾದಿಂದ ಅಗತ್ಯ ಮಾಹಿತಿ ದೊರೆಯುತ್ತಿಲ್ಲ ಎಂದಿದ್ದಾರೆ. ವುಹಾನ್ ನಲ್ಲಿ ಕೊರೋನಾವೈರಸ್ ಹುಟ್ಟಿಕೊಂಡಿದ್ದರಿಂದ ಅದನ್ನು ವುಹಾನ್ ವೈರಸ್ ಅಂತಾ ಟ್ರಂಪ್ ಸರ್ಕಾರದ ಅಧಿಕಾರಿಗಳು ಬಣ್ಣಿಸಿದ್ದಾರೆ.