ಜೂ.27 ರಂದು ಕೊಡಗು ಫಾರ್ ಟುಮಾರೊ ತಂಡದಿಂದ ಗಿಡನೆಡುವ ಕಾರ್ಯಕ್ರಮ

22/06/2020

ಮಡಿಕೇರಿ ಜೂ.22 : ಕೊಡಗು ಫಾರ್ ಟುಮಾರೊ ತಂಡದಿಂದ ಜೂ. 27 ರಂದು ಗಿಡನೆಡುವ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 9.30ಕ್ಕೆ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರು ಮುಖಗವಸು ಕಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು, ಸ್ಯಾನಿಟೈಝರ್ ಕಡ್ಡಾಯ ಹಾಗೂ ನೀರಿನ ಬಾಟಲ್ ಕಡ್ಡಾಯವಾಗಿ ತರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9663662191 ಸಂಪರ್ಕಿಸಬಹುದಾಗಿದೆ.