ಸೋಮವಾರಪೇಟೆಯ ಹಾಕಿ ಆಟಗಾರ ಬಿ.ಪಿ.ಕೃಷ್ಣ (ರಾಜು) ಇನ್ನಿಲ್ಲ

23/06/2020

ಮಡಿಕೇರಿ ಜೂ. 23 : ಹೆಸರಾಂತ ಹಾಕಿ ಆಟಗಾರ ಸೋಮವಾರಪೇಟೆ ವಿಶ್ವೇಶ್ವರ ರಸ್ತೆ ನಿವಾಸಿ ಬಿ.ಪಿ. ಕೃಷ್ಣ (68) ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಬಂದು ಬಳಗವನ್ನು ಆಗಲಿದ್ದಾರೆ.
ಹಾಕಿ ಕ್ರೀಡೆಯಲ್ಲಿ ಮುನ್ನಡೆ ಆಟಗಾರರಾಗಿ ಛಾಪು ಮೂಡಿಸಿದ್ದ ಇವರು ರಾಜ್ಯ ಹಾಕಿ ತಂಡವನ್ನು ಪ್ರತಿ ನಿಧಿಸಿದ್ದರು. 6, 7 ಬಾರಿ ಭಾರತ ಹಾಕಿ ತಂಡದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿದ್ದರೂ ಸಹ ತಂಡದಲ್ಲಿ ಸ್ಥಾನ ಗಳಿಸುವಲ್ಲಿ ವಂಚಿತರಾಗಿದ್ದರು. ಇವರು ಅಂತರರಾಷ್ಟ್ರೀಯ ಹಾಕಿ ಆಟಗಾರ, ಭಾರತ ತಂಡದ ಮಾಜಿ ನಾಯಕ ಬಿ.ಪಿ.ಗೋವಿಂದ ಅವರ ಸಹೋದರರಾಗಿದ್ದಾರೆ. ಐ.ಓ.ಬಿ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು ರಾಜು ಎಂದು ಚಿರಪರಿಚಿತರಾಗಿದ್ದರು.