ಅಮಟೆ ಹಣ್ಣಿನ ಔಷಧೀಯ ಗುಣಗಳು

ಅಮಟೆ (ಸ್ಪೊಂಡಿಯಾಸ್ ಮಾಂಬಿನ್) ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ . ಆಮ್ರಾತಕ ಸಾಮಾನ್ಯ ಹೆಸರು ಅಮಟೆ.ಇದು ಅನಾಕಾರ್ಡಿಯಾಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯಗಳ ಒಂದುಜಾತಿಯಾಗಿದೆ.ಇದರ ವೈಜ್ಞಾನಿಕ ಹೆಸರು ಸ್ಪಾಂಡಿಯಾಸ್‍ಎಂದುಗುರುತಿಸಲಾಗಿದೆ. ಬಿಸಿ ಉಷ್ಣವಲಯದ ತಗ್ಗು ಪ್ರದೇಶಗಳಲ್ಲಿ ಬೆಳೆಯುವ ಈ ಗಿಡ, ಪೂರ್ಣ ಸೂರ್ಯ ಮತ್ತು ಆಂಶಿಕ ನೆರಳನ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಉಪಯೋಗಗಳು :
- ಅಮಟೆ ಹಣ್ಣಿನ ರಸವನ್ನುಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ತೊಗಟೆಯ ರಸವನ್ನು ಗನೋರಿಯಾ ವಾಸಿಮಾಡಲು ಬಳಸುತ್ತಾರೆ.
- ಎಲೆಗಳನ್ನು ಸುವಾಸನೆಗಾಗಿ ಬಳಸುತ್ತಾರೆ.
- ಹಣ್ಣನ್ನು ಹಸಿರು ಮತ್ತು ಹಣ್ಣು ಹಣ್ಣಿನಂತಾಗುವಾಗ ಪದಾರ್ಥಕ್ಕೆಉಪಯೋಗಿಸುತ್ತಾರೆ.
- ಚಟ್ನಿ, ಭಕ್ಷ್ಯ, ಉಪ್ಪಿನಕಾಯಿ, ಜಾಮೂನುಗಳನ್ನು ತಯಾರಿಸುತ್ತಾರೆ.
- ಮರವನ್ನುಅಲಂಕಾರಿಕ ಪ್ಲೈವುಡ್‍ಗಳಾಗಿ ಹಾಗೂ ಪ್ಯಾಕಿಂಗ್ ಮಾಡಲು ಬಳಸುತ್ತಾರೆ.
- ಇಂಧನವಾಗಿಯೂ ಬಳಸುತ್ತಾರೆ.
ಔಷಧೀಯ ಗುಣಗಳು :
ಇದರ ಹಣ್ಣುನ್ನು ರಕ್ತದೊತ್ತಡ ಮತ್ತು ಮೂಲವ್ಯಾಧಿ ರೋಗ ನಿವಾರಣೆಗೆ ಬಳಸುತ್ತಾರೆ. ಹಣ್ಣಿನ ರಸವನ್ನು ಕಿವಿಯ ಸಮಸ್ಯೆಗೆ ಉಪಯೋಗಿಸುತ್ತಾರೆ. ಇದರ ತೊಗಟೆಯನ್ನು ಹೊಟ್ಟೆ ನೋವು ಮತ್ತು ಉರಿಯೂತದ ಚಿಕಿತ್ಸೆಗೆ ಬಳಸುತ್ತಾರೆ. ಸಂಧಿವಾತ ಮತ್ತು ಊದಿಕೊಂಡ ಕೀಲುಗಳ ಚಿಕಿತ್ಸೆಯಲ್ಲಿ ತೊಗಟೆಯ ಪೇಸ್ಟನ್ನು ಬಳಸುತ್ತಾರೆ.ಬೇರನ್ನು ಉಪಯೋಗಿಸುವುದರಿಂದ ಮುಟ್ಟಿನ ನಿಯಂತ್ರಣವನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿದೆ.
