ಒಂದೇ ದಿನ 442 ಮಂದಿಗೆ ಸೋಂಕು

26/06/2020

ಬೆಂಗಳೂರು ಜೂ.26 : ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ 442 ಮಂದಿಗೆ ಕೊರೋನಾಗೆ ತುತ್ತಾಗಿದ್ದಾರೆ.
ಇಂದು ರಾಜ್ಯದಲ್ಲಿ ಹೊಸದಾಗಿ 442 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ.
ಇದರ ಬೆನ್ನಲ್ಲೇ, ಗುರುವಾರ ಒಂದು ದಿನದಲ್ಲೇ ರಾಜ್ಯದಲ್ಲಿ 519 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ ಒಟ್ಟು 6,670 ಮಂದಿ ಚೇತರಿಕೆ ಕಂಡಿದ್ದು, 174 ಮಂದಿ ಮೃತಪಟ್ಟಿದ್ದಾರೆ. ಸದ್ಯ ಒಟ್ಟು 3716 ಸಕ್ರಿಯ ಪ್ರಕರಣಗಳಿವೆ. ಇಂದು ಪತ್ತೆಯಾದ 442 ಪ್ರಕರಣಗಳ ಪೈಕಿ 81 ಮಂದಿ ಅಂತಾರಾಜ್ಯ ಮತ್ತು 23 ಮಂದಿ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ.