ವೀರಾಜಪೇಟೆ, ಗೋಣಿಕೊಪ್ಪದಲ್ಲಿ ಬಂದ್ ಇಲ್ಲ
27/06/2020

ಮಡಿಕೇರಿ ಜೂ.27 : ಕೊಡಗು ಜಿಲ್ಲ್ಲಾ ಚೇಂಬರ್ ಆಫ್ ಕಾಮರ್ಸ್ ತೆಗೆದುಕೊಂಡ ನಿಲುವಿಗೆ ವೀರಾಜಪೇಟೆ ವರ್ತಕರು ತಮ್ಮ ಸಹಮತ ತೋರದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತಿತ್ತು.
ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಬಂದ್ ನಡೆಸದಿರುವಂತೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಒಮ್ಮತದ ನಿರ್ಧಾರ ಕೈಗೊಂಡಿದೆ.
ಜಿಲ್ಲಾ ಚೇಂಬರ್ಸ್ ಆಫ್ ಕಾಮರ್ಸ್‍ನ ಸೂಚನೆ ಮೇರೆಗೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಶನಿವಾರ ತುರ್ತು ಸಭೆ ನಡೆಸಿದರು.
ಹಿರಿಯ ವರ್ತಕರ ಸಲಹೆ ಮೇರೆ ನಗರದಲ್ಲಿ ಎಂದಿನಂತೆ ವರ್ತಕರು ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಲಾಯಿತು. ಕೊರೋನಾ ವೈರಸ್ ಹರಡದಂತೆ ವರ್ತಕರು ತಮ್ಮ ಅಂಗಡಿ, ಮುಂಗಟ್ಟುಗಳಲ್ಲಿ ಸರಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಯಿತು.