ಆಸಕ್ತ ಅಭ್ಯರ್ಥಿಗಳಿಂದ ಕೋಳಿ ಸಾಕಣಿಕೆಗೆ ಅರ್ಜಿ ಆಹ್ವಾನ

July 2, 2020

ಮಡಿಕೇರಿ ಜು.08 : ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖಾ ವತಿಯಿಂದ 2019-20ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಆಸಕ್ತ ಅಭ್ಯರ್ಥಿಗಳಿಂದ ಕೋಳಿ ಸಾಕಣಿಕೆ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜನಾಂಗದವರಿಂದ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯ ಧನ ಮಂಜೂರು ಮಾಡುವ ಸಂಬಂಧ ಕೊಡಗು ಜಿಲ್ಲೆಗೆ 2 ಗುರಿ ನಿಗಧಿಯಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು (ಗ್ರೇಡ್-2) ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಇಲ್ಲಿಗೆ ಜುಲೈ, 20 ರಂದು ಸಂಜೆ 5.30 ಗಂಟೆ ಒಳಗೆ ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.