ಹೋಂ ಐಸೋಲೇಷನ್ : ಜು.7ರಿಂದ ಹೊಸ ಮಾರ್ಗಸೂಚಿ ಜಾರಿ

05/07/2020

ಮಡಿಕೇರಿ ಜು.5 : ಸರ್ಕಾರದಿಂದ ಇತ್ತೀಚಿಗೆ ಸ್ವೀಕೃತವಾದ ಸುತ್ತೋಲೆಯಂತೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರನ್ನು ಅವರ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಇರಿಸುವ ಬಗ್ಗೆ ಮಾರ್ಗಸೂಚಿ ಜು.7ರಿಂದ ಜಾರಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೇವಲ ಲಕ್ಷಣರಹಿತರು ಮತ್ತು ಅತ್ಯಲ್ಪ ಲಕ್ಷಣಗಳಿರುವವರನ್ನು ಮಾತ್ರ ಅವರ ಮನೆಯಲ್ಲಿಯೇ ಪ್ರತ್ಯೇಕಿಸಿ (ಊome Isoಟಚಿಣioಟಿ) ಇರಿಸಲು ಅವಕಾಶ. ಸೋಂಕಿತರ ಮನೆ ಮತ್ತು ಆ ಪ್ರದೇಶದಲ್ಲಿರುವ ಮನೆಗಳು ಸೇರಿದಂತೆ ಸದರಿ ವ್ಯಾಪ್ತಿಯನ್ನು ನಿಯಂತ್ರಿತ ವಲಯವನ್ನಾಗಿಸಲಾಗುವುದು. ಸೋಂಕಿತ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಪರೀಕ್ಷಾ ವರದಿ ನೆಗೆಟಿವ್ ಎಂದು ಬರುವವರೆಗೆ ನಿಯಂತ್ರಿತ ವಲಯ ಜಾರಿಯಲ್ಲಿರುತ್ತದೆ.
ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರನ್ನು ವಿಶೇಷ ಆರೋಗ್ಯ ತಂಡ ಭೇಟಿ ಮಾಡಿ ಆರೋಗ್ಯ ಹಿನ್ನಲೆಯನ್ನು ವಿವರವಾಗಿ ಪಡೆಯುತ್ತದೆ. ನಂತರ ಅವರನ್ನು ಮನೆಯಲ್ಲಿ ಇರಿಸಬಹುದೇ ಅಥವಾ ಆಸ್ಪತ್ರೆಗೆ ದಾಖಲು ಮಾಡಬೇಕೇ ಎಂಬ ಬಗ್ಗೆ ತೀರ್ಮಾನಿಸುತ್ತದೆ. ಸೋಂಕಿತರು ಮತ್ತು ಅವರ ಕುಟುಂಬದ ಸದಸ್ಯರ ಒಪ್ಪಿಗೆ ಇದ್ದಲ್ಲಿ ಮಾತ್ರ ಮನೆಯಲ್ಲಿ ಪ್ರತ್ಯೇಕಿಸಿ ( ಹೋಂ ಐಸೋಲೇಷನ್) ಇರಿಸಲಾಗುವುದು.
ಸೋಂಕಿತ ವ್ಯಕ್ತಿ ಹೋಂ ಐಸೋಲೇಷನ್ ನಲ್ಲಿ ಇರುವ ಬಗ್ಗೆ ನೆರೆಹೊರೆಯ ಮನೆಯವರಿಗೆ ಮಾಹಿತಿ ನೀಡಲಾಗುವುದು. ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಟೆಲಿಮೆಡಿಸಿನ್ ಸೌಲಭ್ಯ ಲಭ್ಯವಿರುತ್ತದೆ. ಯಾವುದೇ ತುರ್ತು ಅಥವಾ ಅನಿವಾರ್ಯ ಪರಿಸ್ಥಿತಿ ಇದ್ದಲ್ಲಿ ಕಂಟ್ರೋಲ್ ರೂಂ. 1077 ಗೆ ಅಥವಾ ಆರೋಗ್ಯ ಇಲಾಖೆಯ ತುರ್ತು ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಅವರನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.
ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ / ಪೆÇ್ರೀಟೋಕಾಲ್ ನ್ನು ಕಡ್ಡಾಯವಾಗಿ ಪಾಲಿಸುವುದು. ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಅವರ ಆರೋಗ್ಯ ಸಂಬಂಧಿತ ವಿಚಾರಗಳನ್ನು ಮರೆ ಮಾಚದೆ ಆರೋಗ್ಯ ತಂಡಕ್ಕೆ ನೀಡತಕ್ಕದ್ದು. ಒಂದು ವೇಳೆ ಮುಚ್ಚಮರೆ ಮಾಡಿದಲ್ಲಿ ಮುಂದಿನ ಎಲ್ಲಾ ಆಗು ಹೋಗುಗಳಿಗೆ ಅವರೇ ಹೊಣೆಗಾರರಾಗಿತ್ತಾರೆಯೇ ವಿನಃ ಆರೋಗ್ಯ ತಂಡ ಜವಾಬ್ದಾರರಾಗಿರುವುದಿಲ್ಲ.
ಸೋಂಕಿತ ವ್ಯಕ್ತಿ ಮತ್ತು ಅವರ ಕುಟುಂಬದ ಸದಸ್ಯರು ಆರೋಗ್ಯ ಇಲಾಖೆ ಅಥವಾ ಆರೋಗ್ಯ ತಂಡ ನೀಡುವ ಆಹಾರ ಪದ್ದತಿಯನ್ನು ಕಡ್ಡಾಯವಾಗಿ ಪಾಲಿಸುವುದು. ಹೋಂ ಐಸೋಲೇಷನ್ ನಲ್ಲಿ ಇರುವಾಗ ಕಡ್ಡಾಯವಾಗಿ ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಇತ್ಯಾದಿಗಳನ್ನು ಮಾಡತಕ್ಕದ್ದಲ್ಲ.
ನೆರೆಹೊರೆಯವರು ಗಾಬರಿಯಾಗಬೇಕಾಗಿಲ್ಲ. ಅವರುಗಳು ಸಹ ಸರ್ಕಾರದ ಮಾರ್ಗಸೂಚಿ / ಪೆÇ್ರೀಟೋಕಾಲ್ ನ್ನು ಕಡ್ಡಾಯವಾಗಿ ಪಾಲಿಸುವುದು. ಯಾವುದೇ ಉಲ್ಲಂಘನೆಗಳು ಕಂಡು ಬಂದಲ್ಲಿ ಸ್ಥಳೀಯ ಪ್ರಾಧಿಕಾರ ( ನಗರ ಸಭೆ/ ಪಟ್ಟಣ ಪಂಚಾಯ್ತಿ/ಗ್ರಾಮ ಪಂಚಾಯ್ತಿ ಇತ್ಯಾದಿ)ಕ್ಕೆ ಕೂಡಲೇ ಮಾಹಿತಿ ನೀಡುವುದು.
ವ್ಯಕ್ತಿಗಳು ತೃಪ್ತಿಕರವಾಗಿ ಹೋ ಐಸೋಲೇಷನ್ ಅವಧಿ ಪೂರೈಸಿದ ಬಗ್ಗೆ ಮತ್ತು ಆರೋಗ್ಯ ಸ್ಥಿತಿಯ ಬಗ್ಗೆ ಆರೋಗ್ಯ ಇಲಾಖೆ ಫಿಟ್ ನೆಸ್ ದೃಢೀಕರಣ ನೀಡಿದ ನಂತರ ಅವರು ಕರ್ತವ್ಯಕ್ಕೆ / ಕೆಲಸಕ್ಕೆ ತೆರಳಬಹುದು.
ಹೋಂ ಐಸೋಲೇಷನ್ ನಲ್ಲಿ ಇರುವ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿ ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ನಗರ ಸಭೆ/ ಪಟ್ಟಣ ಪಂಚಾಯ್ತಿ/ಗ್ರಾಮ ಪಂಚಾಯ್ತಿಯದ್ದಾಗಿರುತ್ತದೆ. ಹೋಂ ಐಸೋಲೇಷನ್ ಅವಧಿ ಪೂರ್ಣಗೊಂಡ ನಂತರ ಸದರಿ ಮನೆಯನ್ನು ಪರಿಣಾಮಕಾರಿಯಾಗಿ ಸೋಂಕು ನಿವಾರಣೆಗೊಳಿಸಲಾಗುವುದು.
ಮೇಲ್ಕಂಡಂತೆ ಎಲ್ಲಾ ಅಂಶಗಳನ್ನು ಸಾರ್ವಜನಿಕರು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಪಾಲಿಸುವುದು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ದ ಸಂಬಂಧಪಟ್ಟ ಕಾಯ್ದೆಗಳಡಿ ಸೂಕ್ತ ಕಾನೂನು ಕ್ರಮ / ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.