“ಸಖಿ ಒನ್ ಸ್ಟಾಪ್ ಸೆಂಟರ್”ಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

09/07/2020

ಮಡಿಕೇರಿ ಜು.09 : ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಸಖಿ ಒನ್ ಸ್ಟಾಪ್ ಸೆಂಟರ್”ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಲು ಬಾಹ್ಯಮೂಲ/ ಹೊರಗುತ್ತಿಗೆ ಆಧಾರದಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಚ್ಛತಾಗಾರರು, ರಕ್ಷಕರು(ಮಹಿಳಾ ಅಭ್ಯರ್ಥಿಗೆ ಮೀಸಲು):- ಹುದ್ದೆಗಳ ಸಂಖ್ಯೆ: 1, ಸ್ವಚ್ಛತಾಗಾರರು/ ರಕ್ಷಕರಾಗಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಸ್ಥಳೀಯ ಅಭ್ಯರ್ಥಿಯಾಗಿರಬೇಕು. ವಯೋಮಿತಿ 45 ವರ್ಷದೊಳಗಿರಬೇಕು. ಮಾಸಿಕ ಗೌರವಧನ ರೂ.15 ಸಾವಿರ ಆಗಿರಬೇಕು.
‘ಸಖಿ ಒನ್ ಸ್ಟಾಪ್ ಸೆಂಟರ್’ ಗಳಲ್ಲಿ ನೇಮಕವಾಗುವ ಸಿಬ್ಬಂದಿಗಳು 24*7 ಕಾರ್ಯನಿರ್ವಹಿಸಲು ಅನುವಾಗುವಂತೆ ವಿವಿಧ ಪಾಳಿಗಳಲ್ಲಿ (ಶಿಫ್ಟ್‍ಗಳಲ್ಲಿ) ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಅರ್ಜಿ ಸಲ್ಲಿಸಲು ಜುಲೈ 16 ಕೊನೇ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಇಲ್ಲಿಯ ದೂರವಾಣಿ ಸಂಖ್ಯೆ: 08272 298379 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ತಿಳಿಸಿದ್ದಾರೆ.