ಕೊರೋನಾ ಮುಂಜಾಗೃತೆ : ಮಡಿಕೇರಿಯಲ್ಲಿ ಶುಕ್ರವಾರದ ಸಂತೆ ರದ್ದು

09/07/2020

ಮಡಿಕೇರಿ ಜು.09 : ನಗರದಲ್ಲಿ ದಿನೇದಿನೇ ಕೊರೋನಾ (ಕೋವಿಡ್-19) ಪ್ರಕರಣಗಳು ಅಧಿಕಗೊಳ್ಳುತ್ತಿರುವ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಮಡಿಕೇರಿ ನಗರದಲ್ಲಿ ನಡೆಯುವ ಶುಕ್ರವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಿ ಮುಂದೂಡಲಾಗಿದೆ. ಮಾರುಕಟ್ಟೆಯ ಸುತ್ತಮುತ್ತ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ. ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಅವರು ಕೋರಿದ್ದಾರೆ.