ಚಾರಣಾಸಕ್ತರಿಗೆ ಪ್ರಶಸ್ತವಾದ ಜಾಗ ಅಂಬಾರ ಗುಡ್ಡ

July 14, 2020

ಅಂಬಾರ ಗುಡ್ಡವು ಕೊಲ್ಲೂರು-ನಿಟ್ಟೂರು-ಭಟ್ಕಳ ಮಾರ್ಗದಲ್ಲಿ ಸುಮಾರು ೪೦ ಕಿ.ಮೀಗಳ ನಂತರ ಸಿಗುತ್ತದೆ. ಇದು ಚಾರಣಾಸಕ್ತರಿಗೆ ಬಹು ಪ್ರಶಸ್ತವಾದ ಜಾಗ. ಕೊಲ್ಲುರಿನಿಂದ ಭಟ್ಕಳಕ್ಕೆ ಹೋಗುವಾಗ ಎಡಬದಿಗೆ ಅಂಬಾರಗುಡ್ಡಕ್ಕೆ ಹೋಗುವ ದಾರಿ ಎಂಬ ನಾಮ ಫಲಕ ಕಾಣುತ್ತದೆ. ಇಲ್ಲಿಂದ ಅಂಬಾರ ಗುಡ್ಡಕ್ಕೆ ಹೋಗಬಹುದು. ಗುಡ್ಡದ ಮೇಲಿನಿಂದ ಮೂಕಾಂಬಿಕಾ ವನ್ಯಜೀವಿ ವಲಯ, ಕೊಡಚಾದ್ರಿ ಬೆಟ್ಟ ಹಾಗು ಕೋಗಾರ್ ಘಾಟಿ ದೃಶ್ಯ ಕಾಣಸಿಗುತ್ತದೆ.

error: Content is protected !!