ತಂಡ ನಿಯೋಜನೆಗೆ 24 ಗಂಟೆ ಗಡುವು

ಬೆಂಗಳೂರು ಜು.15 : ಐಎಲ್‍ಐ, ಸಾರಿ, ಐಸೋಲೇಷನ್ ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲಿನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರ 24 ಗಂಟೆಗಳ ಗಡುವು ನೀಡಿದೆ.
ಬೂತ್ ಮಟ್ಟದ ಕಾರ್ಯಪಡೆಗಳಿಗೆ ನೀಡಬೇಕಾಗಿರುವ ಮಾರ್ಗಸೂಚಿಗಳ ಕುರಿತು ವಿವರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಐಎಲ್‍ಐ, ಸಾರಿ, ಐಸೋಲೇಷನ್ ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲಿನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳಿಗೆ 24 ಗಂಟೆಗಳ ಗಡುವು ನೀಡಲಾಗಿದೆ.
ನಿಯೋಜನೆಗೊಂಡ ತಂಡಗಳು ತಮ್ಮ ತಮ್ಮ ಬೂತ್ ಗಳಲ್ಲಿರುವ ಪ್ರತೀ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಐಸೋಲೇಷನ್ ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಸಾರಿ ಹಾಗೂ ಐಎಲ್‍ಐನಿಂದ ಬಳಲುತ್ತಿರುವ ಜನರನ್ನು ಪರೀಕ್ಷೆಗೊಳಪಡಿಸುವ ಕೆಲಸಗಳೂ ಇದೇ ವೇಳೆ ನಡೆಯುತ್ತವೆ. ಕೊರೋನಾ ಪಾಸಿಟಿವ್ ಬಂದ ಜನರನ್ನು ಕೂಡಲೇ ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರನ್ನು 24 ಗಂಟೆಗಳೊಳಗೆ ಕಂಡು ಹಿಡಿಯುವ ಕಾರ್ಯ ಮಾಡುತ್ತಾರೆಂದು ಹೇಳಿದ್ದಾರೆ.
