ಕೊಡಗಿನಲ್ಲಿ 102 ನಿಯಂತ್ರಿತ ಪ್ರದೇಶಗಳು

16/07/2020

ಮಡಿಕೇರಿ ಜು.16 : ಕೊಡಗು ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ ಕುಶಾಲನಗರ ಬೈಚನಹಳ್ಳಿಯ ಡೀಸೆಲ್ ಕೇರ್ ಮುಂಭಾಗ, ಮಡಿಕೇರಿ ದೇಚೂರು ಗಣಪತಿ ದೇವಸ್ಥಾನ ಬಳಿ, ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ ಹಾಗೂ ಗೋಣಿಕೊಪ್ಪ ಅರುವತ್ತೊಕ್ಲುವಿನ ವಿದ್ಯಾನಿಕೇತನ ರಸ್ತೆಯಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆ 102ಕ್ಕೇ ಏರಿಕೆಯಾಗಿದೆ. ಮಡಿಕೇರಿಯ ಡೈರಿ ಫಾರಂ ಹಾಗೂ ಗೋಣಿಕೊಪ್ಪದ ಕೆಇಬಿ ರಸ್ತೆಯ ನಿಯಂತ್ರಿತ ಪ್ರದೇಶಗಳನ್ನು ಗುರುವಾರದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.