ಸೋಯಾ ಬೀನ್ ಕಬಾಬ್ ಮಾಡುವ ವಿಧಾನ

17/07/2020

ಬೇಕಾಗುವ ಸಾಮಾಗ್ರಿಗಳು : ಸೋಯಾ ಬೀನ್ 10-15, ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಹಸಿ ಮೆಣಸಿನಕಾಯಿ 4, ಈರುಳ್ಳಿ 1, ಕೊತ್ತಂಬರಿ ಸೊಪ್ಪು 1 ಕಟ್ಟು, ಖಾರದ ಪುಡಿ ಅರ್ಧ ಚಮಚ, ಗರಂ ಮಸಾಲ 1 ಚಮಚ, ಕರಿ ಮೆಣಸಿನ ಪುಡಿ ಅರ್ಧ ಚಮಚ, ಎಣ್ಣೆ 3-4 ಚಮಚ, ಮೊಸರು 3 ಚಮಚ, ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ: ಸೋಯಾ ಬೀನ್ ಅನ್ನು 10 ನಿಮಿಷ ಬಿಸಿ ನೀರಿನಲ್ಲಿ ನೆನೆ ಹಾಕಿ. ನಂತರ ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಸಿ ಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ, ಸೋಯಾ ಬೀನ್ ಗೆ ಹಾಕಿ, ಖಾರದ ಪುಡಿ, ಗರಂ ಮಸಾಲ, ಮೊಸರು, ಕರಿ ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಕಾಲ ಇಡಿ. ನಂತರ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಸೋಯಾ ಬೀನ್ ಅನ್ನು 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಸ್ನ್ಯಾಕ್ಸ್ ರೆಡಿ. ಇದನ್ನು ಮೈಕ್ರೋವೇವ್ ನಲ್ಲಿ ಮಾಡಬಹುದಾಗಿದ್ದು ಮಿಕ್ಸ್ ಮಾಡಿಟ್ಟ ಸೋಯಾ ಬೀನ್ ಅನ್ನು ಬೇಕಿಂಗ್ ಡಿಶ್ ಗೆ ಹಾಕಿ, ಎಣ್ಣೆ ಹಾಕಿ 10 ನಿಮಿಷ 60% ಪವರ್ ನಲ್ಲಿ ಇಟ್ಟು ಗ್ರಿಲ್ಡ್ ಮಾಡಿ. ಹೀಗೆ ಮಾಡುವಾಗ 2-3 ನಿಮಿಷಕ್ಕೊಮ್ಮೆ ಸೌಟ್ ನಿಂದ ಆಡಿಸಿ.