ರುಚಿ ರುಚಿಯಾದ ದಹಿ ಪಲಾವ್ ಮಾಡುವ ವಿಧಾನ

20/07/2020

ಬೇಕಾಗುವ ಸಾಮಾಗ್ರಿಗಳು : ಬಾಸುಮತಿ ಅಕ್ಕಿ ಅರ್ಧ ಕೆಜಿ, ಮೊಸರು ಕಾಲು ಲೀಟರ್, ಹಾಲು 1 ಕಪ್ಈರುಳ್ಳಿ 2 (ಕತ್ತರಿಸಿದ್ದು),
ಹಸಿ ಮೆಣಸಿನ ಕಾಯಿ 2, ಮಿಶ್ರ ತರಕಾರಿಗಳು 1 ಕಪ್ (ಆಲೂಗಡ್ಡೆ, ಬೀನ್ಸ್, ಬಟಾಣಿ, ಕ್ಯಾರೆಟ್), ಕಾಳು ಮೆಣಸು 6
ಲವಂಗ 2, ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ, ಏಲಕ್ಕಿ 2, ಸ್ವಲ್ಪ ಗೋಡಂಬಿ ಮತ್ತು ದ್ರಾಕ್ಷಿ, ಚಿಟಿಕೆಯಷ್ಟು ಕೇಸರಿ ಕೆಂಪು,
ಹಳದಿ, ಕಿತ್ತಳೆ ಮಿಶ್ರಿತ ಕಲರ್ 1 ಚಮಚ, ರುಚಿಗೆ ತಕ್ಕ ಉಪ್ಪು, ತುಪ್ಪ 4 ಚಮಚ

ತಯಾರಿಸುವ ವಿಧಾನ :

  • ತರಕಾರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ,. ಉಪ್ಪು ಹಾಕಿ ಬೇಯಿಸಿ, ತುಂಬಾ ಬೇಯಿಸಿಬೇಡಿ. ನಂತರ ಅದರ ನೀರು ಬಸಿದು ಇಡಿ.
  • ಈಗ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಿ.
  • ಈಗ ಅಕ್ಕಿಯನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಅನ್ನವನ್ನು ಅರ್ಧ ಬೇಯಿಸಿ ನಂತರ ತಣ್ಣಗಾಗಲು ಇಡಿ. ನಂತರ ಅದನ್ನು ಮೂರು ಭಾಗ ಮಾಡಿ ಅದಕ್ಕೆ ಕೆಂಪು, ಹಳದಿ, ಕಿತ್ತಳೆ ಬಣ್ಣದ ಪುಡಿಯನ್ನು ಹಾಕಿ ಮಿಶ್ರಣ ಮಾಡಿಡಿ.
  • ಈಗ ತುಪ್ಪವನ್ನು ಪಾತ್ರೆಯಲ್ಲಿ ಹಾಕಿ ಅದು ಬಿಸಿಯಾದಾಗ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  • ನಂತರ ಚಕ್ಕೆ, ಲವಂಗ ಹಾಕಿ ಹುರಿದು ನಂತರ ಬೇಯಿಸಿದ ತರಕಾರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಹುರಿಯನ್ನು ಆಫ್ ಮಾಡಿ.
  • ಈಗ ಬಿರಿಯಾನಿ ಮಾಡುವ ಪಾತ್ರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿ. ಈಗ ಹಳದಿ ಅನ್ನವನ್ನು ಹಾಕಿ ಸ್ವಲ್ಪ ತರಕಾರಿ ಮತ್ತು ಮೊಸರು ಹಾಕಿ ಈ ರೀತಿ ಪದರ-ಪದರವಾಗಿ ಹಾಕಿ ನಂತರ ಉಳಿದ ತರಕಾರಿ ಮತ್ತು ನಟ್ಸ್ ಅನ್ನು ಮೇಲೆ ಹಾಕಿ, ಕೇಸರಿ ಹಾಕಿ ಅದರ ಮೇಲೆ ಹಾಲು ಸುರಿದು ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 30 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ದಹಿ ಪಲಾವ್ ರೆಡಿ.