ಜ್ಯೋತಿ ನಗರ ಸೀಲ್ ಡೌನ್ ಪ್ರದೇಶಕ್ಕೆ ಕಿಟ್ ವಿತರಣೆ

21/07/2020

ಮಡಿಕೇರಿ ಜು.21 : ಕೊರೋನಾ ಸೋಂಕಿತರು ಪತ್ತೆಯಾಗಿ ಸೀಲ್ ಡೌನ್ ಗೆ ಒಳಗಾದ ಅಭ್ಯತ್ ಮಂಗಲದ ಜ್ಯೋತಿ ನಗರದ ಐದು ಬಡಕುಟುಂಬಗಳಿಗೆ ಭಾರತಾಂಬೆ ಯುವಕ ಸಂಘದ ಪ್ರಮುಖರು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಇದೇ ಸಂದರ್ಭ ಈ ಬಡಾವಣೆಯಲ್ಲಿ ಅನಾರೋಗ್ಯ ಪೀಡಿತರಾಗಿ ಸಂಕಷ್ಟದಲ್ಲಿರುವ ಎರಡು ಕುಟುಂಬಗಳಿಗೂ ದಿನಸಿ ಸಾಮಾಗ್ರಿಗಳನ್ನು ನೀಡಿ ಮಾನವೀಯತೆ ಮೆರೆದರು.
ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ರತೀಶ್, ಪ್ರಮುಖರಾದ ಮುರುಳಿ, ದರ್ಶನ್, ವಿನೋದ್, ಶ್ಯಾಮಲಾಲ್, ಪವನ್ ಮತ್ತಿತರರು ಹಾಜರಿದ್ದರು.