ನಾಪತ್ತೆಯಾದ ಯುವಕ ಉಗ್ರನಾದ

28/07/2020

ಶ್ರೀನಗರ ಜು.28 : ನಾಪತ್ತೆಯಾಗಿದ್ದ ಹದಿಹರೆಯದ ಯುವಕನೊಬ್ಬ ಜು.25 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‍ನಲ್ಲಿ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ. ಆತನ ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆಯಾಗಿರುವ ಕುರಿತು ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾನೆ.
ಇತ್ತೀಚೆಗಷ್ಟೆ ದಕ್ಷಿಣ ಕಾಶ್ಮೀರದ ಅಲ್-ಬದ್ರ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದೆ.
ಚತ್ರಿಗಮ್ ಶೋಪಿಯಾನ್ ನ ಕಲನ್ ಗ್ರಾಮದ ನಿವಾಸಿ ಮಗ ಬಶೀರ್ ಅಹ್ಮದ್ ಗನಿ ಎಂಬುವರ ಪುತ್ರ 17 ವರ್ಷದ ಆಸಿಫ್ ಅಹ್ಮದ್ ಗನಿ, ಜುಲೈ 20 ರಂದು ಅವರ ಮನೆಯಿಂದ ನಾಪತ್ತೆಯಾಗಿದ್ದರು.
ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರೂ ಕೂಡ ಭಾರಿ ಶೋಧ ಕಾರ್ಯ ನಡೆಸಿದ್ದರು.