ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 363ಕ್ಕೆ ಏರಿಕೆ

29/07/2020

ಮಡಿಕೇರಿ ಜು.29 : ಕೋವಿಡ್-19 ಸಂಬಂಧಿಸಿದಂತೆ ಜಿಲ್ಲೆಯಲ್ಲಿ 7 ಪ್ರಕರಣ ವರದಿಯಾಗಿದೆ.

ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ 74ವರ್ಷದ ವೃದ್ಧ. ಮಡಿಕೇರಿ ಐಟಿಐ ಹಿಂಭಾಗದ 38 ವರ್ಷದ ಪುರುಷ. ಮಡಿಕೇರಿ ಕರ್ಣಂಗೇರಿ ಗ್ರಾಮದ 32 ವರ್ಷದ ಪುರುಷ. ವೀರಾಜಪೇಟೆಯ ಸಿದ್ಧಾಪುರದ 45 ವರ್ಷದ ಮಹಿಳೆ, 38 ವರ್ಷದ ಮಹಿಳೆ, 15 ವರ್ಷದ ಬಾಲಕ, 9 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 363 ಆಗಿದ್ದು, 270ಜನ ಗುಣಮುಖರಾಗಿದ್ದಾರೆ. 87 ಸಕ್ರಿಯ ಪ್ರಕರಣಗಳಿದ್ದು,6 ಮಂದಿ ಕೋವಿಡ್-೧೯ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ77ಆಗಿದೆ ಎಂದು ಜಿಲ್ಲಾಧಿಲಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.