ಕರ್ನಾಟಕದಲ್ಲಿ ಹೆಚ್ಚು ಹುಲಿಗಳಿರುವುದು ಹೆಮ್ಮೆಯ ವಿಚಾರ : ಪ್ರತಾಪ್ ಸಿಂಹ

29/07/2020

ಮಡಿಕೇರಿ ಜು.29 : ಇಂದು ಹುಲಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಶ್ವ ಹುಲಿ‌ ದಿನ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಹುಲಿಗಳಿರುವುದು ಹೆಮ್ಮೆಯ ವಿಚಾರವೆಂದು ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿಯೇ ಅತಿ ಹೆಚ್ಚು ಹುಲಿಗಳಿವೆ ಮತ್ತು ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದಿದ್ದಾರೆ.