ಜಿಲ್ಲೆಯಲ್ಲಿ ಮತ್ತೆ 5 ಮಂದಿಯಲ್ಲಿ ಸೋಂಕು ಪತ್ತೆ

29/07/2020

ಮಡಿಕೇರಿ ಜು.29 : ಕೋವಿಡ್-19 ಸಂಬಂಧಿಸಿದಂತೆ ಮತ್ತೆ 5 ಮಂದಿಯಲ್ಲಿ ಸೋಂಕು ಪತ್ತೆಯಗಿದ್ದು, ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆಯಾಗಿದೆ.

ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಹಿಂಭಾಗದ 45 ವರ್ಷದ ಪುರುಷ.ಸೋಮವಾರಪೇಟೆ ತಾಲೂಕಿನ ಅಭ್ಯತ್ ಮಂಗಲದ ಜ್ಯೋತಿನಗರದ 49 ವರ್ಷದ ಮಹಿಳೆಗೆ ಸೋಂಕು ದೃಢ ಪಟ್ಟಿದೆ.
ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಬೆಟ್ಟಿಗೇರಿಯ 58 ವರ್ಷದ ಪುರುಷ. ಮಡಿಕೇರಿಯ ನಾಪೋಕ್ಲು ಬಳಿಯ ಎಮ್ಮೆಮಾಡುವಿನ 39 ವರ್ಷದ ಪುರುಷ. ಮಡಿಕೇರಿಯ ಕಾರು ಗುಂದದ ಕಡಿಯತ್ತೂರಿನ 60 ವರ್ಷದ ಮಹಿಳೆಗೆ ಸೋಂಕು ದೃಢ ಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 368 ಆಗಿದ್ದು, 270 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 92 ಆಗಿದ್ದು, 6 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 80 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.