ಅಂತಾರಾಷ್ಟ್ರೀಯ ಕಳ್ಳರ ಬಂಧನ

31/07/2020

ಬೆಂಗಳೂರು ಜು.31 : ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರ ಪಕ್ಕದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅಂತಾರಾಷ್ಟ್ರೀಯ ಕಳ್ಳರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೊಲಂಬಿಯಾ ದೇಶದ ವಿಲಿಯನ್ ಪಡಿಲ್ಲಾ ಮಾರ್ಟಿನೆಜ್ (48), ಲೇಡಿ ಸ್ಟೇಫನಿಯಾ ಮುನೋಜ್ ಮೋನ್ ಸಾಲ್ವೆ (23), ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ (34) ಬಂಧಿತ ಆರೋಪಿಗಳು.
ಬಂಧಿತರಿಂದ ಎರಡು ಕೋಟಿ ಐವತ್ತೆಂಟು ಲಕ್ಷ ಆರು ನೂರು ರೂ. ಮೌಲ್ಯದ 6 ಕೆಜಿ 143 ಗ್ರಾಂ ತೂಕದ ಚಿನ್ನಾಭರಣ, 4,00,000 ರೂ. ಮೌಲ್ಯದ 9ಮಿಮಿ ಬ್ರೋವಿಂಗ್ ಪಿಸ್ತೂಲ್ ಹಾಗೂ 23 ಲೈವ್ ರೌಂಡ್ಸ್, 60 ಸಾವಿರ ರೂ. ಮೌಲ್ಯದ 2 ದ್ವಿಚಕ್ರ ವಾಹನಗಳು, 3 ಅಸಲಿ ಪಾಸ್ ಪೋರ್ಟ್, 1 ನಕಲಿ ಪಾಸ್ ಪೋರ್ಟ್ ಸೇರಿ 1 ನಕಲಿ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.