ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಸಾಧಕ ವಿದ್ಯಾರ್ಥಿನಿ ಟಿ.ಕೆ ಭವಾನಿ ಗೆ ಸಹಾಯ

31/07/2020

ಮಡಿಕೇರಿ ಜು.31 : ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹೆಗ್ಗಳ ಗ್ರಾಮದ ವಿದ್ಯಾರ್ಥಿನಿ ಟಿ.ಕೆ ಭವಾನಿ ಗೆ ಇಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಹತ್ತು ಸಾವಿರ ರೂಪಾಯಿ ಆರ್ಥಿಕ ಸಹಾಯ ಹಾಗೂ ಸೋಲಾರ್ ದೀಪ ನೀಡಲಾಯಿತು. ಭವಾನಿಯ ಬಡತನದ ಸಂಕಷ್ಟದ ಬದುಕಿನ ಕುರಿತು ವರದಿ ಮಾಡಿ ಪತ್ರಕರ್ತೆ ಉಷಾ ಅವರು ಪ್ರಜಾಸತ್ಯ ಪತ್ರಿಕೆಯ ಮೂಲಕ ಗಮನ ಸೆಳೆದಿದ್ದರು. ಇದನ್ನು ಗಮನಿಸಿದ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ ಅವರು ರೋಟರಿ ಮಿಸ್ಟಿ ಹಿಲ್ಸ್ ನಿಂದ ನೆರವು ದೊರಕಿಸಿಕೊಟ್ಟಿದ್ದಾರೆ.