ಸುಂಟಿಕೊಪ್ಪದಲ್ಲಿ ಎಸ್‍ಡಿಪಿಐ ಕಾರ್ಯಕರ್ತರಿಂದ ಸಿಲ್‍ಡೌನ್ ನಿವಾಸಿಗಳಿಗೆ ದಿನಸಿ ಕಿಟ್ ವಿತರಣೆ

31/07/2020

ಸುಂಟಿಕೊಪ್ಪ,ಜು.31: ಶಿವರಾಮ ರೈ ಬಡಾವಣೆಯ ಬಾಲಕನಿಗೆ ಕರೋನಾ ಸೋಂಕು ಕಂಡು ಬಂದಿದ್ದು ಬಡಾವಣೆಯನ್ನು ಸಿಲ್‍ಡೌನ್‍ಗೊಳಿಸಲಾಗಿತ್ತು. ಎಸ್‍ಡಿಪಿಐ ವತಿಯಿಂದ ಬಡಾವಣೆಯ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಿದರು.
ಸುಂಟಿಕೊಪ್ಪದ 1ನೇ ವಿಭಾಗದ ಶಿವರಾಮರೈ ಬಡಾವಣೆಯ 22 ಕುಟುಂಬಗಳಿಗೆ ಸುಂಟಿಕೊಪ್ಪ ಎಸ್‍ಡಿಪಿಐ ಕಾರ್ಯಕರ್ತರು ತೆರಳಿ ಆಹಾರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯೆ ನಾಗರತ್ನ ಸುರೇಶ್, ಎಸ್‍ಡಿಪಿಐ ಪಕ್ಷದ ಅಧ್ಯಕ್ಷ ಬಾಶಿತ್, ಎಸ್‍ಡಿಪಿಐ ಪಕ್ಷದ ಖಜಾಂಜಿ ಕೆ.ಎ.ಲತೀಫ್, ಮೊಯಿದ್ದೀನ್ ಮತ್ತಿತರರು ಇದ್ದರು.