ಬಲ್ಯಮುಂಡೂರಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

05/08/2020

ಮಡಿಕೇರಿ ಆ. 5 : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ವಿರಾಜಪೇಟೆಯ ಬಲ್ಯಮುಂಡೂರು ಗ್ರಾಮದ ಕೂಟ್ಟಂಗಡ ಎಂ. ದೇವಕ್ಕಿ ಎಂಬವರ ಮನೆಯ ಮೇಲೆ ಮರ ಬಿದ್ದು ಬಹುತೇಕ ಹಾನಿಯಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಪರಿಹಾರ ಒದಗಿಸುವಂತೆ ಬಿಜೆಪಿ ತಾಲ್ಲೂಕು ಕೃಷಿ ಮೋರ್ಚದ ಸದಸ್ಯ ಕೊಟ್ಟಂಗಡ ಅಯ್ಯಪ್ಪ ಒತ್ತಾಯಿಸಿದ್ದಾರೆ.