ತಲಕಾವೇರಿಯಲ್ಲಿ ಭೂವಿಜ್ಞಾನಿಗಳು ಹೇಳಿದ ಬೆಟ್ಟದ ಭಾಗವೇ ಕುಸಿಯಿತು

06/08/2020

ಮಡಿಕೇರಿ ಆ.6 : ಕಳೆದ ವರ್ಷ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಬೆಟ್ಟಕ್ಕೆ ಭೂವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿ ಅಪಾಯದ ಮುನ್ಸೂಚನೆ ನೀಡಿದ್ದರು. ಇದೇ ಬೆಟ್ಟದ ಬಿರುಕಿನ ಭಾಗ ಇಂದು ಕುಸಿದು ಎರಡು ಮನೆಗಳನ್ನು ನಾಶ ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಂದು ಬಿರುಕು ಬಿಟ್ಟ ಪ್ರದೇಶದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಬಿರುಕು ಮುಚ್ಚುವ ಪ್ರಯತ್ನ ಮಾಡಿದ್ದರು. ಅಲ್ಲದೆ ಮಳೆ ನೀರು ಪ್ರವೇಶಿಸದಂತೆ ಕ್ರಮ ಕೈಗೊಂಡಿದ್ದರು.