ಚೆಟ್ಟಳ್ಳಿ ಚೇರಳ ಭಗವತಿ ದೇವಾಲಯದ ರಸ್ತೆ ಸಂಪರ್ಕ ಕಡಿತ

07/08/2020

ಮಡಿಕೇರಿ ಆ. 7 : ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುತಿರುವ ಭಾರೀ ಮಳೆಯಿಂದಾಗಿ ಚೇರಳ ಭಗವತಿ ದೇವಾಲಯಕ್ಕೆ ತೆರಳುವ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.
ಚೇರಳದೇವಾಲಯಕ್ಕೆ ತೆರಳುವ ಒಂದು ಬದಿ ಕುಸಿತಗೊಂಡಿದ್ದು, ಅಪಾಯ ಅಂಚಿನಲ್ಲಿದೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಕಳೆದ ವರ್ಷದಿಂದಲೇ ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಲಾಗಿತ್ತು. ಅಧಿಕಾರಿಗಳು ರಸ್ತೆ ಪರಿಶೀಲನೆ ನಡೆಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೇವಾಲಯದ ತಕ್ಕಮುಖ್ಯಸ್ಥರು ಆರೋಪಿಸಿದ್ದಾರೆ.