ಮಡಿಕೇರಿ-ಸಿದ್ದಾಪುರ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿತ : ರಸ್ತೆ ಸಂಚಾರ ಸ್ಥಗಿತ

07/08/2020

ಮಡಿಕೇರಿ ಆ. 7 : ಭಾರೀ ಮಳೆಗೆ ಮಡಿಕೇರಿ-ಸಿದ್ದಾಪುರ ರಾಜ್ಯ ಹೆದ್ದಾರಿ ಕುಸಿತಗೊಂಡಿದೆ. ಚೆಟ್ಟಳ್ಳಿ ಬಳಿಯ ಅಬ್ಯಾಲದಲ್ಲಿ ಅರ್ಧ ರಸ್ತೆ ಕೊಚ್ಚಿ ಹೋಗಿದ್ದು, ಮತ್ತಷ್ಟು ಕುಸಿಯುವ ಆತಂಕ ಉಂಟಾಗಿದೆ.
ಮೇಲ್ಭಾಗದಿಂದ ನಿರಂತರವಾಗಿ ಗುಡ್ಡ ಕುಸಿಯುತ್ತಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.