ನಾಪೋಕ್ಲುವಿನ ಚೆರಿಯಪರಂಬು ಜಲಾವೃತ : ಸ್ಥಳಿಯ ನಿವಾಸಿಗಳ ಸ್ಥಳಾಂತರ

07/08/2020

ಮಡಿಕೇರಿ ಆ. 7 : ಭಾರೀ ಮಳೆಯಿಂದಾಗಿ ನಾಪೋಕ್ಲು ಸುತ್ತಮುತ್ತ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ಮಟ್ಟ ದಿನೇ ದಿನೇ ಅಪಾಯಕಾರಿಯಾಗಿ ಏರುತ್ತಲೇ ಇದೆ. ಪಟ್ಟಣದ ಸಮೀಪ ಕಾರೇಕ್ಕಾಡ್ ಎಂಬಲ್ಲಿ ಪಿ.ಪಿ. ಕಾಂಪ್ಲೆಕ್ಸ್‍ಗೆ ಪ್ರವಾಹದ ನೀರು ಆವರಿಸಿಕೊಂಡಿದ್ದು, ಮುಖ್ಯ ರಸ್ತೆಯ ಮೇಲೆ 3 ಅಡಿಗಳಷ್ಟು ನೀರು ತುಂಬಿಕೊಂಡಿದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಆರ್. ಕಿರಣ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಿದ್ದಾರೆ.
ಅಲ್ಲದೇ ಚೆರಿಯಪರಂಬು ದರ್ಗಾ ಹಿಂಭಾಗದ ಪ್ರವಾಹ ಆವರಿಸಿ ಮನೆಯಲ್ಲಿ ಸಿಕ್ಕಿಹಾಕಿಕೊಂಡ ಜನರನ್ನು ಈ ದಿನ ಎನ್‍ಡಿಆರ್‍ಎಫ್ ತಂಡ ಆಗಮಿಸಿ ಬೋಟಿನ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.