ಎಸ್‍ಎಸ್‍ಎಲ್‍ಸಿ ಯಲ್ಲಿ ಸೋಮವಾರಪೇಟೆ ವಿದ್ಯಾರ್ಥಿಗಳ ಸಾಧನೆ

11/08/2020

ಮಡಿಕೇರಿ ಆ. 11 : ಸೋಮವಾರಪೇಟೆಯ ಸಾಂದೀಪನಿ ಆಂಗ್ಲಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. 31 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿ ಗಾನ 618 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ.
ಕನ್ನಡದಲ್ಲಿ 122, ಇಂಗ್ಲೀಷ್ 97, ಹಿಂದಿ 100, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ 100 ಅಂಕಗಳನ್ನು ಪಡೆದಿದ್ದಾಳೆ. ಐ.ಎ.ಎಸ್. ಮಾಡುವ ಗುರಿಯಿದ್ದು, ಲಾಕ್‍ಡೌನ್ ಆಗಿದ್ದು ಓದುವುದಕ್ಕೆ ಉಪಯೋಗವಾಯಿತು. ಪ್ರತಿದಿನ 5ರಿಂದ 6ಗಂಟೆ ಕಲಿಯುತ್ತಿದ್ದೆ ಎಂದು ಗಾನ ಹೇಳಿದಳು.
ಚೌಡ್ಲು ಗ್ರಾಮದ ವಿಶ್ವಮಾನವ ಕುವೆಂಪು ಪ್ರೌಢಶಾಲೆಗೆ ಶೇ.100 ಫಲಿತಾಂಶ ದೊರೆತ್ತಿದೆ. 33 ವಿದ್ಯಾರ್ಥಿಗಳಲ್ಲಿ 10 ಅತ್ಯುನ್ನತ ಶ್ರೇಣಿ, 10 ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿ ಹೆಚ್.ಕೆ.ರಾಹುಲ್ 607 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾನೆ. ಕನ್ನಡ 121, ಇಂಗ್ಲೀಷ್ 99, ಹಿಂದಿ 100, ಗಣಿತ 95, ವಿಜ್ಞಾನ 93, ಸಮಾಜ ವಿಜ್ಞಾನ 99 ಅಂಕಗಳನ್ನು ಗಳಿಸಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಪ್ರವಿಕ್ 605 ಅಂಕಗಳನ್ನು ಗಳಿಸಿದ್ದಾನೆ.
ಓ.ಎಲ್.ವಿ. ಆಂಗ್ಲಮಾಧ್ಯಮ ಶಾಲೆಗೆ ಶೇ.95.89 ಫಲಿತಾಂಶ ದೊರೆತ್ತಿದೆ. ಪರೀಕ್ಷೆಗೆ ಹಾಜರಾಗಿದ್ದ 73 ವಿದ್ಯಾರ್ಥಿಗಳಲ್ಲಿ 70 ಉತ್ತೀರ್ಣರಾಗಿದ್ದು ಶಾಲೆಯ ವಿದ್ಯಾರ್ಥಿನಿ ಎನ್.ಕೆ.ಶ್ರಾವಣಿ 605 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 19 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.84.2 ಫಲಿತಾಂಶ ದೊರೆತ್ತಿದೆ. ಕೆ.ಆರ್. ಹರ್ಷಿತಾ 598 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.