ಕುತ್ತುನಾಡು ಸಹಕಾರ ಸಂಘದಿಂದ ಆಶಾ ಕಾರ್ಯಕರ್ತೆಗೆ ಸನ್ಮಾನ

August 11, 2020

ಮಡಿಕೇರಿ ಆ.11 : ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆ ಗ್ರಾಮಸ್ಥರ ಹಿತವನ್ನು ಕಾಯುತ್ತಾ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆ ಬಿ.ಪಿ.ಜೈಸಿ ಅವರನ್ನು ಕುತ್ತುನಾಡು ಕೃಷಿ ಪತ್ತಿನ ಸಹಕಾರ ಸಂಘ, ಬಿ.ಶೆಟ್ಟಿಗೇರಿಯ ಆಡಳಿತ ಮಂಡಳಿ ಆತ್ಮೀಯವಾಗಿ ಸನ್ಮಾನಿಸಿತು. ಇವರ ಸೇವೆಯನ್ನು ಶ್ಲಾಘಿಸಿ 3 ಸಾವಿರ ರೂ.ಗಳ ಚೆಕ್ ನ್ನು ಹಸ್ತಾಂತರಿಸಲಾಯಿತು.
ಸಹಕಾರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಕೆ.ಗಣಪತಿ, ಉಪಾಧ್ಯಕ್ಷ ಎನ್.ಕೆ.ಉಮೇಶ್, ಮಾಜಿ ಅಧ್ಯಕ್ಷ ಟಿ.ಬಿ.ಗಣೇಶ್, ನಿರ್ದೇಶಕರಾದ ಬಿ.ಕೆ.ಅಶೋಕ್ ಕುಮಾರ್, ಚೇತನ್ ನಂಜಪ್ಪ, ಟಿ.ಜಿ.ಸುರೇಶ್, ಪಿ.ಎ.ರಮೇಶ್, ಕೆ.ಎಂ.ಸುಬ್ರಹ್ಮಣಿ, ಕೆ.ಪಿ.ಕರುಂಬಯ್ಯ, ಟಿ.ಎಂ.ಸದನ್, ಕೆ.ಕುಸುಮ ಜೋಯಪ್ಪ, ಸಿ.ಎಂ.ಕಾವೇರಮ್ಮ, ಕೆ.ಕೆ.ಮಾರ, ಸಿಬ್ಬಂದಿಗಳಾದ ಎಂ.ಬಿ.ಲಲಿತ, ಎನ್.ಬಿ.ಅಪ್ಪಣ್ಣ ಹಾಗೂ ಎಂ.ಬಿ.ಮಧು ಹಾಜರಿದ್ದರು.

error: Content is protected !!