Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
9:27 PM Sunday 17-October 2021

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪ್ರಬಂಧ, ಕಥೆ-ಕವಿತೆ ಸ್ಪರ್ಧೆ

14/08/2020

ಮಡಿಕೇರಿ ಆ.14 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಗಳಾದ ಐಚೆಟ್ಟಿರ.ಮಾ.ಮುತ್ತಣ್ಣ ಹಾಗೂ ಬಾಚಮಾಡ.ಡಿ.ಗಣಪತಿ ಅವರ “ಜನ್ಮ ಶತಮಾನೋತ್ಸವ”ದ ನೆನಪಿಗಾಗಿ ಕೊಡವ ಭಾಷೆಯಲ್ಲಿ ಪ್ರಬಂಧ, ಕಥೆ, ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಿಗದಿತ ಸಮಯದೊಳಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಗೆ ತಲುಪಿಸಲು ಕೋರಿದೆ. ಪ್ರಬಂಧದ ವಿಷಯ: ಐಚೆಟ್ಟಿರ.ಮಾ.ಮುತ್ತಣ್ಣ /ಬಾಚಮಾಡ.ಡಿ.ಗಣಪತಿ ಬದ್‍ಕ್ ಪಿಂಞ ಸಾಧನೆ” ಮತ್ತು ಕೊಡವ ಭಾಷೆಯಲ್ಲಿ ಕವಿತೆ ಮತ್ತು ಕಥೆ (ಯಾವುದಾದರೂ ವಿಚಾರದ ಬಗ್ಗೆ).
ಯಾವುದೇ ಜಾತಿ, ಧರ್ಮ, ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸಬಹುದು. ಪ್ರಬಂಧವು ಕೊಡವ ಭಾಷೆಯಲ್ಲೇ ಇದ್ದು, 200 ಸಾಲು ಮೀರದಂತೆ, ಸ್ಪಷ್ಟವಾಗಿ ಮುದ್ರಿತವಾಗಿರಬೇಕು, ಇಲ್ಲ ಕೈಬರಹದಲ್ಲಿರಬೇಕು. ಹಾಗೂ ಕಥೆಯೂ ಒಂದು ಸಾವಿರ ಪದಗಳನ್ನು ಮೀರಬಾರದು. ಒಬ್ಬ ಮೂರರಲ್ಲೂ ಭಾಗವಹಿಸಬಹುದು. ಆದರೆ ಒಂದೇ ಪ್ರಬಂಧ/ ಕಥೆ/ ಕವಿತೆಯನ್ನು ಪ್ರತಿಯೊಬ್ಬರೂ ಬರೆಯಬೇಕು. ಪ್ರಬಂಧ/ ಕಥೆ/ ಕವಿತೆಯೂ ಬೇರೆಲ್ಲೂ ಪ್ರಕಟವಾಗಿರಬಾರದು. ಹಾಗೂ ಸ್ವಂತದ್ದಾಗಿರಬೇಕು. ಅನುವಾದಿತವಾಗಿರಬಾರದು.
ಪ್ರಬಂಧ, ಕಥೆ, ಕವಿತೆ ಬರೆದು ಕಳುಹಿಸಲು ಆಗಸ್,್ಟ 25 ಕೊನೆಯ ದಿನವಾಗಿದೆ. ಇದನ್ನು ಇ-ಮೇಲ್ ಅಥವಾ ಖುದ್ದಾಗಿ ತಲುಪಿಸಬೇಕು. ಪ್ರಬಂಧ, ಕಥೆ ಹಾಗೂ ಕವಿತೆ ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಅಭಿನಂದನಾ ಪತ್ರ ನೀಡಲಾಗುವುದು. ಪ್ರಬಂಧ, ಕಥೆ ಹಾಗೂ ಕವಿತೆಯನ್ನು ಬರೆದ ಹಾಳೆಯಲ್ಲಿ ತಮ್ಮ ಹೆಸರನ್ನು ಬರೆಯುವಂತಿಲ್ಲ ಅದನ್ನು ಬೇರೆ ಹಾಳೆಯಲ್ಲಿ ಬರೆಯಬಹುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ ಭವನ, ಮಡಿಕೇರಿ–571201 ದೂ.ಸಂ(08272-229074) ಈ ಮೇಲ್ ವಿಳಾಸ kodava.acadamy@gmail.com ಸಂಪರ್ಕಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಾರ್ವತಿ ಅಪ್ಪಯ್ಯ ಅವರು ಕೋರಿದ್ದಾರೆ.