ಯಶಸ್ವಿಯಾಗಿ ನಡೆದ ಕೊಡವಾಮೆರ ಕೊಂಡಾಟ ಕೂಟದ ಕಥಾ ಸ್ಪರ್ಧೆ

14/08/2020

ಮಡಿಕೇರಿ ಆ. 14 : ತ್ರಿಭಾಷಾ ಸಾಹಿತ್ಯದ ಕೃಷಿ ಮಾಡಿ ಸಾಹಿತ್ಯ ಕ್ಷೇತ್ರದ ಮೇರು ನಕ್ಷತ್ರಗಳಾಗಿರುವ ಡಾ. ಐ.ಮಾ. ಮುತ್ತಣ್ಣ ಹಾಗೂ ಬಿ.ಡಿ. ಗಣಪತಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ನಡೆಯುತ್ತಿರುವ ಸಾಹಿತ್ಯ ಸ್ಪರ್ಧೆಯ ಎರಡನೇ ತಿಂಗಳ ಕೊಡವ ಕಥೆ ರಚನಾ ಸ್ಪರ್ಧೆಯು ಯಶಸ್ವಿಯಾಗಿ ನಡೆಯಿತು.
ಅಂತರ್ಜಾಲದ ಮೂಲಕ ನಡೆದ ಸ್ಪರ್ಧೆಯಲ್ಲಿ ಜಮ್ಮಡ ಮೋನಭೀಮಯ್ಯ ಪ್ರಥಮ, ಮುಕ್ಕಟೀರ ಹರ್ಷಿತಾ ಪೂಣಚ್ಚ ದ್ವಿತೀಯ ಹಾಗೂ ಎಂ.ಎ. ರುಬೀನಾ ತೃತಿತ ಬಹುಮಾನ ಪಡೆದರು. ತೀರ್ಪುಗಾರರಾಗಿ ಸಾಹಿತಿ, ಶಿಕ್ಷಕಿ ಚೋಕಿರ ಅನಿತಾ ದೇವಯ್ಯ ಕಾರ್ಯನಿರ್ವಹಿಸಿದ್ದಾರೆ.