ಗಂಟಲ ದ್ರವ ಪರೀಕ್ಷೆ ದರ ಇಳಿಕೆ

August 15, 2020

ಬೆಂಗಳೂರು ಆ.15 : ಗಂಟಲು ದ್ರವ ಪರೀಕ್ಷೆ ದರವನ್ನು ಇಳಿಕೆ ಮಾಡಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ದರವನ್ನು 2,000 ರೂ ನಿಂದ 1500 ರೂ.ಗೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅದೇ ರೀತಿ ಖಾಸಗಿ ಆಸ್ಪತ್ರೆಯಲ್ಲಿ 3000 ಇದ್ದ ದರವನ್ನು 2500 ರೂ. ಗೆ ಇಳಿಸಲಾಗಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಕಾರ್ಯಪಡೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಇನ್ನು 18 ಲಕ್ಷ ಆರ್ ಟಿಸಿ ಪಿಆರ್ ಟೆಸ್ಟ್ ಕಿಟ್ ಹಾಗೂ 20 ಲಕ್ಷ ರ್ಯಾಪಿಡ್ ಆಂಟಿಜನ್ ಕಿಟ್ ಖರೀದಿಗೆ ನಿರ್ಧರಿಸಲಾಗಿದೆ. ಕಾರ್ಯಪಡೆ ಸಭೆಯಲ್ಲಿ 18 ಸಾವಿರ ಜನಕ್ಕೆ ಸಿರಾಲಜಿ ಟೆಸ್ಟ್ ಮಾಡಲು ತೀರ್ಮಾನಿಸಿದ್ದು, ರಾಜ್ಯಾದ್ಯಂತ ಸಿರಾಲಜಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 1.90 ಕೋಟಿ ರೂ. ಹಣ ಖರ್ಚಾಗುತ್ತದೆ. ರಾಜ್ಯಾದ್ಯಂತ ಸಿರಾಲಜಿ ಟೆಸ್ಟ್ ಮಾಡುತ್ತೇವೆ. ಆ ಮೂಲಕ ಯಾರಿಗೆ ಈಗಾಗಲೇ ಕೋವಿಡ್ 19 ಬಂದು ಹೋಗಿದೆ ಎಂಬ ಬಗ್ಗೆ ಪರೀಕ್ಷೆ ಎಂಬುದರ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

error: Content is protected !!