ಕೊಡಗಿನಲ್ಲಿ 12 ಹೊಸ ಕೊವೀಡ್ ಪ್ರಕರಣ ಪತ್ತೆ

August 25, 2020

ಮಡಿಕೇರಿ ಆ. 25 : ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ಕುಶಾಲನಗರ ಡ್ರೀಮ್ ಲೇಔಟಿನ ನಿಸರ್ಗಧಾಮ ಬಳಿಯ 30 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಶ್ರೀಮಂಗಲದ ಕೃಷ್ಣ ದೇವಾಲಯ ಬಳಿಯ 19 ಮತ್ತು 49 ವರ್ಷದ ಪುರುಷರು.
ವಿರಾಜಪೇಟೆ ಶ್ರೀಮಂಗಲದ 76 ವರ್ಷದ ಮಹಿಳೆ.
ಮಡಿಕೇರಿ ಎಮ್ಮೆಮಾಡುವಿನ ಪಡಿಯಣಿ ಮಸೀದಿ ಬಳಿಯ 58 ವರ್ಷದ ಪುರುಷ.
ಕುಶಾಲನಗರ ಸೋಮೇಶ್ವರ ಬಡಾವಣೆಯ 45, 24 ಮತ್ತು 25 ವರ್ಷದ ಮಹಿಳೆಯರು.
ಕುಶಾಲನಗರ ಬಸಪ್ಪ ಲೇಔಟಿನ 8 ವರ್ಷದ ಬಾಲಕಿ.
ಕುಶಾಲನಗರ ಮುಳ್ಳುಸೋಗೆಯ ಶಕ್ತಿ ಬಡಾವಣೆಯ 41 ವರ್ಷದ ಪುರುಷ.
ಕುಶಾಲನಗರ ಮುಳ್ಳುಸೋಗೆಯ 1ನೇ ಬ್ಲಾಕಿನ 70 ವರ್ಷದ ಮಹಿಳೆ.
ಕುಶಾಲನಗರ ನಿಜಾಮುದ್ದೀನ್ ಲೇಔಟಿನ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1232 ಆಗಿದ್ದು, 953 ಮಂದಿ ಗುಣಮುಖರಾಗಿದ್ದಾರೆ. 263 ಸಕ್ರಿಯ ಪ್ರಕರಣಗಳಿದ್ದು, 16 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 254 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.