ಮಡಿಕೇರಿಯಿಂದ ಮೇಕೇರಿ ವರೆಗೆ ಸಂಚಾರ ನಿಷೇಧ

August 28, 2020

ಮಡಿಕೇರಿ ಆ.28 : ವಿರಾಜಪೇಟೆ -ಬೈಂದೂರು ರಸ್ತೆಯ 27.00 ರಿಂದ 31.00 ಕಿ.ಮೀ.ರವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರೀಟಿಕರಣ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಡಿಕೇರಿಯಿಂದ ಮೇಕೇರಿ ವರೆಗಿನ ರಸ್ತೆಯಲ್ಲಿ ಆ.30 ರಿಂದ ಅ.30 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಬದಲಿ ರಸ್ತೆಯಾದ ಮಡಿಕೇರಿ-ತಾಳತ್ತಮನೆ-ಮೇಕೇರಿ ಮಾರ್ಗವನ್ನು ಬಳಸುವಂತೆ ಅವರು ತಿಳಿಸಿದ್ದಾರೆ.

error: Content is protected !!