ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ : ಬೈಚನಹಳ್ಳಿಯಲ್ಲಿ ಮಹಿಳೆ ಸಾವು

29/08/2020

ಮಡಿಕೇರಿ ಆ.29 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ 53 ವರ್ಷದ ಪುರುಷರೊಬ್ಬರು ಹಿಂದಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ತೀವ್ರ ಅಸ್ವಸ್ಥಗೊಂಡ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೊತ್ತೊಂದು ಪ್ರಕರಣದಲ್ಲಿ ಕುಶಾಲನಗರದ ಬೈಚನಹಳ್ಳಿ ನಿವಾಸಿ 60 ವರ್ಷದ ಮಹಿಳೆಯೊಬ್ಬರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ರಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ಇರುವುದು ದೃಢಪಟ್ಟಿತ್ತು. ಇವರು ಮನೆಯಲ್ಲೇ ಮೃತಪಟ್ಟಿದ್ದು, ಮೃತದೇಹದ ಅಂತ್ಯ ಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ.
::: 37 ಪ್ರಕರಣ ಪತ್ತೆ :::
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1379ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1098 ಮಂದಿ ಗುಣಮುಖರಾಗಿದ್ದಾರೆ. 262 ಸಕ್ರಿಯ ಪ್ರಕರಣಗಳಿದ್ದು, 19 ಮಂದಿ ಸಾವಿಗೀಡಾಗಿದ್ದಾರೆ. ಶನಿವಾರ ಬೆಳಗ್ಗೆ 23 ಹಾಗೂ ಮಧ್ಯಾಹ್ನ 14 ಸೇರಿದಂತೆ 37 ಹೊಸ ಪ್ರಕರಣಗಳು ದೃಢಪಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

::: ಮಕ್ಕಳಲ್ಲಿ ಸೋಂಕು :::
ವೀರಾಜಪೇಟೆ ನೆಹರು ನಗರದ ಮಸೀದಿ ಬಳಿಯ 7 ಮತ್ತು 2 ವರ್ಷದ ಬಾಲಕನಲ್ಲಿ, ನಿಸರ್ಗ ಲೇಔಟಿನ 8 ವರ್ಷದ ಬಾಲಕಿ ಹಾಗೂ ಮಡಿಕೇರಿ ನಗರದ ದೇಚೂರಿನ ಆಂಜನೇಯ ಕಟ್ಟೆ ಬಳಿಯ 13 ವರ್ಷದ ಬಾಲಕಿಯಲ್ಲಿ, ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿ ಗ್ರಾಮದ 16 ವರ್ಷದ ಬಾಲಕನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 68 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ಗರಗಂದೂರು ಸೇತುವೆ ಬಳಿಯ 34 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ರಿಮಾಂಡ್ ಹೋಮ್ ಬಳಿಯ 28 ಮತ್ತು 57 ವರ್ಷದ ಪುರುಷರು, ಸೋಮವಾರಪೇಟೆ ಗರ್ವಾಲೆ ಗ್ರಾಮದ 34 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 62 ವರ್ಷದ ಮಹಿಳೆ, 29 ಮತ್ತು 70 ವರ್ಷದ ಪುರುಷರು, ಸೋಮವಾರಪೇಟೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಗ್ರಾಮದ 60 ವರ್ಷದ ಪುರುಷ, ಮಡಿಕೇರಿ ದೇಚೂರಿನ ಆಂಜನೇಯ ಕಟ್ಟೆಯ 36 ವರ್ಷದ ಪುರುಷ, ದಕ್ಷಿಣ ಕನ್ನಡ ಸುಳ್ಯದ 33 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ಮಡಿಕೇರಿ ಮೂರ್ನಾಡುವಿನ ಗಾಂಧಿನಗರದ 26 ವರ್ಷದ ಮಹಿಳೆ, ವೀರಾಜಪೇಟೆ ನೆಹರು ನಗರದ ಮಸೀದಿ ಬಳಿಯ 33 ವರ್ಷದ ಪುರುಷ ಹಾಗೂ 49 ವರ್ಷದ ಮಹಿಳೆ, ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 42 ವರ್ಷದ ಮಹಿಳೆ, ವೀರಾಜಪೇಟೆ ವಿದ್ಯಾನಗರದ 58 ಮತ್ತು 80 ವರ್ಷದ ಮಹಿಳೆಯರು, ವೀರಾಜಪೇಟೆ ನಿಸರ್ಗ ಲೇಔಟ್‍ನ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ 14 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದ್ದು, ವೀರಾಜಪೇಟೆ ಮೊಗರಗಲ್ಲಿ ಮಸೀದಿ ಬಳಿಯ 25 ವರ್ಷದ ಮಹಿಳೆ, ವೀರಾಜಪೇಟೆ ಡೆಂಟಲ್ ಕಾಲೇಜು ಬಳಿಯ 32 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ ನಲ್ವತ್ತೆಕ್ರೆಯಲ್ಲಿನ 50 ವರ್ಷದ ಪುರುಷನಲ್ಲಿ ಸೋಂಕು ಗೋಚರಿಸಿದೆ.
ಕುಶಾಲನಗರ ಬೈಚನಹಳ್ಳಿಯ ವಿಲ್ಕೋ ಗೋಲ್ಡ್ ಬಳಿಯ 60 ವರ್ಷದ ಮಹಿಳೆ, ಗುಡ್ಡೆಹೊಸೂರುವಿನ 35 ವರ್ಷದ ಪುರುಷ, ಕೂಡಿಗೆ ಸೈನಿಕ ಶಾಲೆಯ ವಸತಿಗೃಹದ 35 ವರ್ಷದ ಪುರುಷ, ಕುಶಾಲನಗರ ಸುಂದರನಗರ ವೃತ್ತ ಬಳಿಯ 50 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ವೀರಾಜಪೇಟೆ ಹುದಿಕೇರಿಯ ಪ್ರಾಥಮಿಕ ಶಾಲೆ ಎದುರಿನ 46 ವರ್ಷದ ಪುರುಷ ಪಿರಿಯಾಪಟ್ಟಣ ಬಾರೆಹೊಸಹಳ್ಳಿಯ ಸಮುದಾಯ ಭವನ ಸಮೀಪದ 38 ವರ್ಷದ ಮಹಿಳೆ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದಕ್ಷಿಣ ಕನ್ನಡದ ಕಲ್ಲುಗುಂಡಿಯ 66 ವರ್ಷದ ಪುರುಷ, ಸೋಮವಾರಪೇಟೆ ಕಲ್ಕಂದೂರುವಿನ 49 ವರ್ಷದ ಮಹಿಳೆ, ಮೈಸೂರಿನ 56 ವರ್ಷದ ಪುರುಷ, ಮಡಿಕೇರಿ ಎಫ್.ಎಂ.ಸಿ ಕಾಲೇಜು ಹಿಂಭಾಗದ 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.