ಎನ್‍ಐಟಿಕೆ ಸುರತ್ಕಲ್ ವತಿಯಿಂದ ಕೊಡಗು ಆರೋಗ್ಯ ಇಲಾಖೆಗೆ 3 ಸಾವಿರ ಫೇಸ್‍ಶೀಲ್ಡ್ ಕೊಡುಗೆ

02/09/2020

ಮಡಿಕೇರಿ ಸೆ.2 : ಎನ್‍ಐಟಿಕೆ ಸುರತ್ಕಲ್ ವತಿಯಿಂದ ಬುಧವಾರ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ 3 ಸಾವಿರ ಫೇಸ್‍ಶೀಲ್ಡ್ ಗಳನ್ನು ನೀಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ ಅವರು ತಿಳಿಸಿದ್ದಾರೆ.
ಈ ಫೇಸ್ ಶೀಲ್ಡ್‍ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.
3 ಸಾವಿರ ಫೇಸ್ ಶೀಲ್ಡ್ ಗಳಲ್ಲಿ 500 ನ್ನು ಒಎಂಪಿಎಲ್ ಅಧಿಕಾರಿಗಳ ಸಂಘ ಮತ್ತು 2,500 ಫೇಸ್ ಶೀಲ್ಡ್‍ಗಳನ್ನು ಒಎಂಪಿಎಲ್ ಒಎನ್‍ಜಿಸಿ ಯವರು ಪ್ರಾಯೋಜಿಸಿದ್ದು, ಜಿಲ್ಲೆಗೆ ಉಚಿತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಜಿಲ್ಲೆಗೆ ನೀಡಿರುವ ಫೇಸ್ ಶೀಲ್ಡ್ ಗಳು ಉತ್ತಮ ದರ್ಜೆಯದ್ದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ ಅನನ್ಯ ವಾಸುದೇವ ಅವರು ತಿಳಿಸಿದರು. ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಇತರರು ಹಾಜರಿದ್ದರು.