ಕರ್ನಾಟಕ ಅರೆಭಾಷೆ ಅಕಾಡೆಮಿಗೆ ಸಹ ಸದಸ್ಯರ ನೇಮಕ
02/09/2020

ಮಡಿಕೇರಿ ಸೆ.2 : ಕರ್ನಾಟಕ ಅರೆಭಾμÉ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡಮಿಗೆ 3 ಜನ ಸಹ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ ಅವರು ತಿಳಿಸಿದ್ದಾರೆ.
ಸೆ.1 ರಂದು ಕರ್ನಾಟಕ ಅರೆಭಾμÉ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸರ್ವ ಸದಸ್ಯರ ಸಭೆಯಲ್ಲಿ ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪುರುμÉೂೀತ್ತಮ ಕೆ.ವಿ, ಮಂಗಳೂರಿನ ಬ್ಯಾಂಕ್ ಆಫ್ ಬರೋಡ ಅಲಸಂಡೆಮಜಲು ಮನೆಯ ಭರತೇಶ್ ಎ.ಬಿ ಮತ್ತು ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮ ಮತ್ತು ಅಂಚೆಯ ಕುಂಬಳಚೇರಿ ಮನೆಯ ಕಿರಣ್ ಕುಂಬಳಚೇರಿ ಅವರನ್ನು ಸರ್ವಾನುಮತದಿಂದ ಸಹ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಚಿನ್ನಸ್ವಾಮಿ ಹೇಳಿದರು.