ಕಳ್ಳಭಟ್ಟಿ ದಂಧೆ : ಒಂಟಿಯಂಗಡಿ ಮಹಿಳೆಯ ಬಂಧನ

September 15, 2020

ಮಡಿಕೇರಿ ಸೆ.15 : ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಣ್ಣಂಗಾಲ ಪಂಚಾಯಿತಿ ವ್ಯಾಪ್ತಿಯ ಒಂಟಿಯಂಗಡಿ ಗ್ರಾಮದ ನಿವಾಸಿ ಎ.ಕೆ.ಮೀನ ತನ್ನ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತು ದಾಳಿ ನಡೆಸಿದ ಪೊಲೀಸರು 8 ಲೀ ಪುಳಿಗಂಜಿ ಮತ್ತು ಕಳ್ಳಭಟ್ಟಿ ತಯಾರಿಕೆಗೆ ಬಳಸಿದ ಪಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಹಾಗೂ ವೃತ್ತ ನೀರಿಕ್ಷಕ ಕ್ಯಾತೇಗೌಡ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಎ.ಎಸ್.ಐ ಶಿವಣ್ಣ, ಸಿಬ್ಬಂದಿಗಳಾದ ನೆಹರು ಕುಮಾರ್, ಕಾವೇರಪ್ಪ, ಜೊಯಪ್ಪ ಹಾಗೂ ಮಹಿಳಾ ಸಿಬ್ಬಂದಿ ಶಿಲ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!