“ಸ್ನೇಹಧಾರ” ಮಾಸ ಪತ್ರಿಕೆ ಪ್ರಚಾರ ಅಭಿಯಾನ : ಯುವ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಅಬ್ದುಸ್ಸಮದ್ ಪೂಕೋಟೂರ್ ಕರೆ

18/09/2020

ಮಡಿಕೇರಿ : ಇಂದಿನ ಯುವ ಪೀಳಿಗೆ ಆಧನಿಕ ಯುಗದ ಭರಾಟೆಯಲ್ಲಿ ಮುಳುಗಿ,ಓದುವ ಹವ್ಯಾಸವನ್ನು ಕಳೆದುಕೊಂಡಿದ್ದಾರೆ.
ಯುವ ಸಮುದಾಯ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸೌಹಾರ್ದಯುತ, ಉತ್ತಮ ಸಮಾಜ ನಿರ್ಮಿಸಲು ಪಣತೊಡಬೇಕಾಗಿದೆ ಎಂದು ಸಮಸ್ತ ಪ್ರಮುಖ ನೇತಾರ,ವಾಗ್ಮಿ ಅಬ್ದುಸಮದ್ ಪುಕೋಟೂರ್ ಕರೆ ನೀಡಿದ್ದಾರೆ.

ಎಸ್.ಕೆ.ಎಸ್.ಎಸ್.ಎಫ್ ಕೊಡಗು ಹಾಗೂ ಜಿಸಿಸಿ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ ತಿಂಗಳಿನಿಂದ ಬಿಡುಗಡೆಗೊಳ್ಳುತ್ತಿರುವ ನೂತನ ಸ್ನೇಹಧಾರ ಎಂಬ ಮಾಸಪತ್ರಿಕೆಯ ಪ್ರಚಾರ ಅಭಿಯಾನದ ಅಂಗವಾಗಿ ನಡೆದ ಆನ್ ಲೈನ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣ, ಡಿಜಿಟಲ್ ಮಾಧ್ಯಮ ಹೀಗೆ ಹಲವಾರು ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಬೆರಳ ತುದಿಯಲ್ಲಿ ,ಕ್ಷಣ-ಕ್ಷಣಕ್ಕೂ ಸುದ್ದಿಗಳು ಲಭ್ಯವಾದರೂ ಸಹಾ, ಪತ್ರಿಕೆ ಓದುವಾಗ ಸಿಗುವ ಮೌಲ್ಯಕ್ಕೆ ಯಾವ ವಿದ್ಯುನ್ಮಾನ ಮಾಧ್ಯಮ ಸರಿಸಾಟಿಯಾಗದು ಎಂದು ಅಬ್ದುಸ್ಸಮದ್ ಪೂಕೋಟೂರ್ ಹೇಳಿದರು.
ಎಸ್.ಕೆ.ಎಸ್‌.ಎಸ್.ಎಸ್.ಎಫ್ ಹಾಗೂ ಜಿಸಿಸಿ ಸಮಿತಿಗಳು ಜಂಟಿಯಾಗಿ ಹೊರತರಲು ಉದ್ದೇಶಿಸಿರುವ “ಸ್ನೇಹಧಾರ” ಮಾಸ ಪತ್ರಿಕೆ ಓದುಗರ ನೆಚ್ಚಿನ ಪತ್ರಿಕೆಯಾಗಲಿ ಎಂದು ಅವರು ಶುಭಹಾರೈಸಿದರು.

ಆನ್ ಲೈನ್ ನಲ್ಲಿ ನಡೆದ ಕಾರ್ಯಕ್ರಮವನ್ನು ಪಾಣಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಲ್ ಉದ್ಘಾಟಿನೆ ಮಾಡಿದರು.
ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿ ಅಧ್ಯಕ್ಷರಾದ ಸಯ್ಯದ್ ಹಮೀದಲಿ ಶಿಹಾಬ್ ತಂಙಲ್ ಪಾಲ್ಗೊಂಡಿದ್ದರು.

ಪ್ರಚಾರದ ಅಂಗವಾಗಿ ದುಬೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸ್ ಕೆ.ಎಸ್.ಎಸ್.ಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಶುಹೈಬ್ ತಂಙಳ್ ಹಾಗೂ ಯುಎಇ ಕರ್ನಾಟಕ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಅಸ್ಗರ್ ಅಲಿ ತಂಙಳ್ ರವರು ಪ್ರಚಾರ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ,
ಯುಎಇ ಕೊಡಗು ಸಮಿತಿಯ ಅಧ್ಯಕ್ಷರಾದ ಲತೀಫ್ ಕಡಂಗ, ಇರ್ಷಾದ್ ಕೂಡಿಗೆ, ಆಸಿಫ್ ಸೋಮವಾರಪೇಟೆ ಹಾಗೂ ಎಸ್ ಕೆ ಎಸ್ ಎಸ್ ಎಫ್ ಯುಎಇ ಸಮಿತಿಯ ನಾಯಕರುಗಳು ಹಾಜರಿದ್ದರು.