ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2237ಕ್ಕೆ ಏರಿಕೆ : 4 ತಿಂಗಳ ಗಂಡು ಮಗುವಿಗೆ ಸೋಂಕು

19/09/2020

ಮಡಿಕೇರಿ ಸೆ.19 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 27 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 16 ಸೇರಿದಂತೆ ಒಟ್ಟು 43 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಾಪೋಕ್ಲು ಚೆರಿಯಪರಂಬುವಿನ ಸರ್ಕಾರಿ ಶಾಲೆ ಸಮೀಪದ 23, 38 ಮತ್ತು 19 ವರ್ಷದ ಮಹಿಳೆಯರು. ಮಡಿಕೇರಿ ಚೆಯ್ಯಂಡಾಣೆ ಚೆಲುವಾರ ಗ್ರಾಮದ ಸಮುದಾಯ ಭವನ ಸಮೀಪದ 52 ವರ್ಷದ ಪುರುಷ. ಕುಶಾಲನಗರ ಕರಿಯಪ್ಪ ಬಡಾವಣೆಯ 46 ವರ್ಷದ ಮಹಿಳೆ. ಸೋಮವಾರಪೇಟೆ ಕುಂಡಲಿ ಗ್ರಾಮ ಮತ್ತು ಅಂಚೆಯ 25 ವರ್ಷದ ಪುರುಷ. ಸೋಮವಾರಪೇಟೆ ಶ್ರೀಮಂಗಲ ಪೇಟೆಬೀದಿಯ 75 ವರ್ಷದ ಮಹಿಳೆ. ಸೋಮವಾರಪೇಟೆ ಕೂಡಿಗೆ ವೃತ್ತ ಸಮೀಪದ 62 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಭಾಗಮಂಡಲದ ತಣ್ಣೀಮಾನಿ ಶಾಲೆ ಸಮೀಪದ 42 ವರ್ಷದ ಮಹಿಳೆ. ಕುಶಾಲನಗರ ಬಸವೇಶ್ವರ ಲೇಔಟಿನ 48 ವರ್ಷದ ಮಹಿಳೆ. ಸುಂಟಿಕೊಪ್ಪ ಕೆದಕಲ್ ನ ಆಲೂರು ಚೌಡೇಶ್ವರಿ ಕಾಲೋನಿ ಪ್ರಾಥಮಿಕ ಶಾಲೆ ಸಮೀಪದ 25 ವರ್ಷದ ಮಹಿಳೆ. ಮಡಿಕೇರಿ ಮಕ್ಕಂದೂರು ಗ್ರಾಮದ ತಂತಿಪಾಲದ 4 ತಿಂಗಳ ಗಂಡು ಮಗು. ಮಡಿಕೇರಿ ಕಾನ್ವೆಂಟ್ ಜಂಕ್ಷನ್ನಿನ 29 ವರ್ಷದ ಪುರುಷ. ಮಡಿಕೇರಿ ಕಾನ್ವೆಂಟ್ ಜಂಕ್ಷನ್ನಿನ ಪರೇಡ್ ಗ್ರೌಂಡ್ ಹಿಂಭಾಗದ 52 ವರ್ಷದ ಮಹಿಳೆ. ಮಡಿಕೇರಿ ಕಾವೇರಿ ರೆಸಿಡೆನ್ಸಿ ಸಮೀಪದ 38 ವರ್ಷದ ಮಹಿಳೆ. ಮಡಿಕೇರಿ ಭಗವತಿ ನಗರದ 59 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿಯ ಕುಡ್ಲೂರು ಗ್ರಾಮದ ಸರ್ಕಾರಿ ಶಾಲೆ ಎದುರಿನ 38 ವರ್ಷದ ಪುರುಷ. ಸಿದ್ದಾಪುರ ಅಂಬೇಡ್ಕರ್ ನಗರದ ಕೆ.ಇ.ಬಿ ಕಚೇರಿ ಸಮೀಪದ 35 ವರ್ಷದ ಪುರುಷ. ವಿರಾಜಪೇಟೆ ಹುದಿಕೇರಿ ಹೋಬಳಿಯ ತೆರಾಳು ಗ್ರಾಮದ 68 ವರ್ಷದ ಮಹಿಳೆ, 41, 36 ವರ್ಷದ ಪುರುಷರು, 11 ವರ್ಷದ ಬಾಲಕ ಮತ್ತು 40 ವರ್ಷದ ಮಹಿಳೆ. ಸೋಮವಾರಪೇಟೆ ಶೆಟ್ಟಳ್ಳಿಯ ಕಾಫಿ ಬೋರ್ಡ್ ಸಮೀಪದ 37, 31 ಮತ್ತು 44 ವರ್ಷದ ಪುರುಷರು. ಗೋಣಿಕೊಪ್ಪ ಹೈಸ್ಕೂಲ್ ಗ್ರೌಂಡ್ ಸಮೀಪದ 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ ಮಂಗಳಾದೇವಿ ನಗರದ ಅಂಗನವಾಡಿ ಸಮೀಪದ 38 ವರ್ಷದ ಮಹಿಳೆ. ಸುಂಟಿಕೊಪ್ಪ ಉಳ್ಳುಗುಲ್ಲಿಯ ಮಾರುಕಟ್ಟೆ ಸಮೀಪದ 19 ವರ್ಷದ ಮಹಿಳೆ. ಪಿರಿಯಾಪಟ್ಟಣ ಆಲನಹಳ್ಳಿಯ 42 ವರ್ಷದ ಪುರುಷ ಮತ್ತು 46 ವರ್ಷದ ಮಹಿಳೆ. ಕುಶಾಲನಗರ ಆರ್.ಎಂ.ಸಿ ಸಮೀಪದ ಸಿಂಗಾರಮ್ಮ ಲೇಔಟಿನ 26 ವರ್ಷದ ಮಹಿಳೆ. ಮೂರ್ನಾಡುವಿನ ವೆಂಕಟೇಶ್ ಕಾಲೋನಿಯ 21 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಕಾರ್ಕಳ್ಳಿ ಬಾಣೆಯ ಕಟ್ಟೆ ಬಸವೇಶ್ವರ ದೇವಾಲಯ ಸಮೀಪದ 60 ವರ್ಷದ ಮಹಿಳೆ. ಪೆÇನ್ನಂಪೇಟೆ ಬೆಂಗೂರು ಗ್ರಾಮದ ಮಾಪಲೆತೋಡು ಸರ್ಕಾರಿ ಶಾಲೆ ಸಮೀಪದ 59 ವರ್ಷದ ಪುರುಷ. ಮಡಿಕೇರಿ ಜಲಾಶಯ ಬಡಾವಣೆಯ ಸುದರ್ಶನ ವೃತ್ತ ಸಮೀಪದ 58 ವರ್ಷದ ಮಹಿಳೆ. ಕುಶಾಲನಗರ ಮಾರುಕಟ್ಟೆ ರಸ್ತೆಯ 45 ವರ್ಷದ ಪುರುಷ. ಕುಶಾಲನಗರ ಕರಿಯಪ್ಪ ಬಡಾವಣೆಯ ಜೂನಿಯರ್ ಕಾಲೇಜು ಸಮೀಪದ 41 ವರ್ಷದ ಮಹಿಳೆ. ಕುಶಾಲನಗರ ಕೂಡುಮಂಗಳೂರು ಬಸವೇಶ್ವರ ದೇವಾಲಯ ಸಮೀಪದ 32 ವರ್ಷದ ಪುರುಷ. ಕುಶಾಲನಗರ ಗುಮ್ಮನಕೊಲ್ಲಿಯ ಸರ್ಕಾರಿ ಶಾಲೆ ಸಮೀಪದ 44 ವರ್ಷದ ಪುರುಷ. ಕುಶಾಲನಗರ ಗೊಂದಿಬಸವನಹಳ್ಳಿಯ 37 ವರ್ಷದ ಪುರುಷ ಮತ್ತು 2 ವರ್ಷದ ಮಹಿಳೆ. ಶ್ರೀಮಂಗಲ ಮುಧಳ ಕೊಪ್ಪಲು ಗ್ರಾಮದ 57 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2237 ಆಗಿದ್ದು, 1812 ಮಂದಿ ಗುಣಮುಖರಾಗಿದ್ದಾರೆ. 395 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 341 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.