ಪ್ರಧಾನಿ ಮೋದಿ ಜನ್ಮ ದಿನದ ಪ್ರಯುಕ್ತ ಪಾರಿಜಾತ ಗಿಡ ನೆಟ್ಟ ಚೆಟ್ಟಳ್ಳಿ ಬಿಜೆಪಿ

ಚೆಟ್ಪಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಚೆಟ್ಟಳ್ಳಿ ಬಿಜೆಪಿ ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿ ದೈವಿಕ ಗುಣವಿರುವ ‘ಪಾರಿಜಾತ ಗಿಡ’ ನೆಟ್ಟು ಸಂಭ್ರಮಿಸಿದರು. ಮೋದಿ ಅವರ ಶ್ರೇಯಸ್ಸಿಗೆ ದೇವರಲ್ಲಿ ಪ್ರಾರ್ಥಿಸಲಾಯಿತು. ಈರಳೆವಲಮುಡಿ ಭಗವತಿ, ಚೇರಳ ಭಗವತಿ, ಶ್ರೀಮಂಗಲ ಭಗವತಿ ಹಾಗೂ ಕೂಡ್ಲೂರು ಚೆಟ್ಟಳ್ಳಿ ವಿನಾಯಕ ದೇವಾಲಯದ ಆವರಣದಲ್ಲಿ ಗಿಡ ನೆಡಲಾಯಿತು. ಬಿಜೆಪಿ ತಾಲೂಕು ಮಂಡಳ ಕಾರ್ಯದರ್ಶಿ ಮೇರಿ ಅಂಬು ದಾಸ್, ತಾಲೂಕು ಪಂಚಾಯತ್ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಶಕ್ತಿ ಕೇಂದ್ರ ಪ್ರಮುಖ್ ಕಂಠಿ ಕಾರ್ಯಪ್ಪ ಬಲ್ಲಾರಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರ ಸಹ ಪ್ರಮುಖ್ ರವಿ ಎನ್ ಎಸ್, ಕೃಷಿ ಮೋರ್ಚಾ ಅಧ್ಯಕ್ಷ ಯದು ಕುಮಾರ್, ತಾಲೂಕು ಸಮಿತಿ ಸದಸ್ಯ ಮರದಾಲು ಹರಿ, ಅರುಣ ಸಿದ್ಧಿಕಲ್, ಓಬಿಸಿ ಮೋರ್ಚಾ ಅಧ್ಯಕ್ಷ ಸುನಿಲ್ ವಾರ್ಡ್ ಅಧ್ಯಕ್ಷರು ಕಾರ್ಯದರ್ಶಿಗಳಾದ ಜಗತ್ ನೂಜುಬೈಲ್,ಪೇರಿಯನ ಉದಯ, ಕಡ್ಯಡ ಉದಯ ಹಾಗೂ ಸಮಿತಿ ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.